ಕರಾವಳಿ

ಸುಳ್ಯ: ಮಾನಸಿಕ ಅಸ್ವಸ್ಥೆಯ ಅತ್ಯಾಚಾರ ನಡೆಸಿದವನಿಗೆ ಜೈಲು ಶಿಕ್ಷೆ

ಸುಳ್ಯ: ಮಾನಸಿಕ ಅಸ್ವಸ್ಥ ಮಹಿಳೆಯನ್ನು ಅತ್ಯಾಚಾರಗೈದು ಕೊಲೆಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಬಂಧನಕ್ಕೊಳಕ್ಕಾಗಿದ್ದ ವ್ಯಕ್ತಿಗೆ ಸುಳ್ಯ ನ್ಯಾಯಾಲಯ ಎರಡು ವರ್ಷ ಸಾದಾ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ವಿಫಲವಾದಲ್ಲಿ 1 ತಿಂಗಳ ಸಾದಾ ಜೈಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ಸುಳ್ಯ ತಾಲೂಕು ಬಾಳಿಲ ಗ್ರಾಮದ ಕಾಂಚೋಡು ಎಂಬಲ್ಲಿ 2015 ಜನವರಿ 11ರಂದು ಮಾನಸಿಕ ಅಸ್ವಸ್ಥರಾಗಿದ್ದ 28 ವರ್ಷದ ಮಹಿಳೆಯೋರ್ವರು  ಒಬ್ಬರೇ ಮನೆಯಲ್ಲಿ ಇದ್ದ ಸಂದರ್ಭ ಕಳಂಜ ಗ್ರಾಮದ ಕೋಟೆ ಮುಂಡುಗಾರು ನಿವಾಸಿ ಸುಬ್ರಮಣ್ಯ ಎಂಬುವವರು ಮಹಿಳೆಯ ಮಾನಭಂಗ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸಂತ್ರಸ್ತೆಯ ತಾಯಿ ಬೀಡಿ  ಕೊಡಲು ಬಾಳಿಲ ಪೇಟೆಗೆ ಹೋದ ಸಂದರ್ಭ ಮನೆಗೆ ಅಕ್ರಮ ಪ್ರವೇಶ ಮಾಡಿದ್ದ ಆರೋಪಿ ಕುಡಿಯಲು ನೀರು ಕೇಳುವ ನೆಪದಲ್ಲಿ ಮಹಿಳೆಯ ಕೈಯನ್ನು ಹಿಡಿದು ಕೋಣೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಆಕೆಯನ್ನು ನೆಲದ ಮೇಲೆ ತಳ್ಳಿಹಾಕಿ ಮಾನಭಂಗ ಮಾಡಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಇನ್ನೊಮ್ಮೆ ಬಂದು ಕುತ್ತಿಗೆಗೆ ಹಗ್ಗ ಹಾಕಿ ನೇತಾಕುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪದ ಮೇಲೆ ಸುಳ್ಯ ಠಾಣೆಯಲ್ಲಿ ಕಲಂ 448, 354, 354(A)(1)(2)(4)506 ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು. ಅಂದಿನ ಎ.ಎಸ್.ಐ. ಪುರುಷೋತ್ತಮ ಕೆ. ಪ್ರಕರಣ ದಾಖಲಿಸಿ ಎಸ್.ಐ. ಚಂದ್ರಶೇಖರ್ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Related posts

ಮದ್ಯ ಸೇವಿಸಿ ಕೊಳವೊಂದಕ್ಕೆ ಸ್ನಾನಕ್ಕಿಳಿದ ವ್ಯಕ್ತಿ ದುರಂತ ಅಂತ್ಯ,ಏನಿದು ಘಟನೆ?

ಸುಳ್ಯ: ವಿದ್ಯಾರ್ಥಿಗಳೆಂದು ನಂಬಿಸಿ ಚಿನ್ನದಂಗಡಿ ಮಾಲೀಕನಿಗೆ 3 ಪವನ್ ಕದ್ದ ಸರವನ್ನು ಹಿಡಿಸಿದ ಗಂಡ-ಹೆಂಡ್ತಿ..! ಚಿನ್ನದಂಗಡಿ ಮಾಲೀಕನಿಗೆ 1 ಲಕ್ಷದ 43 ಸಾವಿರ ರೂ. ಪಂಗನಾಮ..!

ಕರಾವಳಿ ಬೆಡಗಿಯ ಮುಂದಿನ ಸಿನಿಮಾದ ಹೆಸರು ‘ಕುಲದಲ್ಲಿ ಕೀಳ್ಯಾವುದೋ’,ಸೋನಲ್ ಮೊಂತೆರೋ ನಟಿಸಲಿರುವ ಈ ಚಿತ್ರದ ವಿಶೇಷತೆಗಳೇನು ಗೊತ್ತಾ?