ನ್ಯೂಸ್ ನಾಟೌಟ್: ಸುಳ್ಯದಲ್ಲಿ ಭಾರೀ ಮಳೆ ಗಾಳಿ ಗುಡುಗು ಮಿಂಚು ಅಬ್ಬರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ಹಲವು ಕಡೆ ಮರಗಳು ಧರೆಗೆ ಬಿದ್ದಿವೆ.
ಇದೀಗ ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಮೀಪವಿರುವ ಕುರುಂಜಿ ಭಾಗ್ ಬಳಿ ರಿಕ್ಷಾ ಸ್ಟ್ಯಾಂಡ್ ನಲ್ಲಿ ಮರವೊಂದು ಧರೆಗೆ ಬಿದ್ದಿದೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಅಡ್ಡಲಾಗಿ ಬಿದ್ದಿದ ಮರವನ್ನು ರಿಕ್ಷಾ ಚಾಲಕರು ತೆರವುಗೊಳಿಸಿದರು.