ಕರಾವಳಿಶಿಕ್ಷಣ

ಸುಳ್ಯ-ಪುತ್ತೂರು: ನೀವು ವಿದ್ಯಾರ್ಥಿಗಳಾಗಿದ್ದರೆ ನಿಮಗೊಂದು ಸಿಹಿ ಸುದ್ದಿ, ಎಲ್ಲಿ..? ಏನು..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನ್ಯೂಸ್ ನಾಟೌಟ್ : ನೀವು ವಿದ್ಯಾರ್ಥಿಗಳೇ..? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶವನ್ನು ಹೆಮ್ಮೆಯ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಒದಗಿಸುತ್ತಿದೆ. ಪುತ್ತೂರು, ಸುಳ್ಯದಲ್ಲಿ ಬ್ರ್ಯಾಂಚ್ ಹೊಂದಿರುವ ಈ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಪ್ರಯುಕ್ತ ಉಚಿತ ಕಂಪ್ಯೂಟರ್ ತರಬೇತಿ ನೀಡಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಅರ್ಜಿಯನ್ನ ಆಹ್ವಾನಿಸಿದೆ.

ಪ್ರತಿ ವರ್ಷವೂ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಅನ್ನುವ ನಿಟ್ಟಿನಲ್ಲಿ ಉಚಿತ ತರಬೇತಿಯನ್ನು ಆಯೋಜಿಸುತ್ತಲೇ ಬಂದಿದೆ. ಇದೀಗ ಪ್ರಸಕ್ತ 2024ನೇ ಸಾಲಿನಲ್ಲಿಯೂ ಅರ್ಜಿಯನ್ನು ಆಹ್ವಾನಿಸಿದೆ. ಈ ತರಬೇತಿಯು ಸಂಪೂರ್ಣ ಉಚಿತವಾಗಿದೆ. ಯಾವುದೇ ಪ್ರೌಢಶಾಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸೀಮಿತ ಸೀಟುಗಳು ಮಾತ್ರ. ಹೀಗಾಗಿ ಆಸಕ್ತ ಅಭ್ಯರ್ಥಿಗಳು ದಿನಾಂಕ 04-005-2024 ರ ಮೊದಲು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪುತ್ತೂರಿನ ಪ್ರಧಾನ ಕಚೇರಿಯಲ್ಲಿ ಅಥವಾ ಸುಳ್ಯ ಶಾಖೆಯಲ್ಲೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9945988118 / 9632320477 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಸುಳ್ಯ: ರಾಮಮಂದಿರ ಬ್ಯಾನರ್ ಹರಿದ ಪ್ರಕರಣ, SPಗೆ ಕರೆ ಮಾಡಿ ಕಠಿಣ ಕ್ರಮಕ್ಕೆ ಸಂಸದ ನಳಿನ್ ಕುಮಾರ್ ಒತ್ತಾಯ

ಉಡುಪಿ: ಶಾಲೆ- ಕಾಲೇಜುಗಳ ರಜೆಯ ನಕಲಿ ಸುತ್ತೋಲೆ ವೈರಲ್..! ಇಲ್ಲಿದೆ ಸಂಪೂರ್ಣ ಮಾಹಿತಿ

Kerala: ಕೋಟಿ..ಕೋಟಿ ತೆರಿಗೆ ವಂಚಿಸುತ್ತಿದ್ದ ಯೂಟ್ಯೂಬರ್ಸ್ ಮನೆ ಮೇಲೆ ಐಟಿ ದಾಳಿ, ಇವರ ತಿಂಗಳ ಆದಾಯ ನೋಡಿ ಅಧಿಕಾರಿಗಳಿಗೇ ಬಿಗ್ ಶಾಕ್