ಕರಾವಳಿ

ಸುಳ್ಯ ನಗರಕ್ಕೆ ಶುದ್ಧ ಕುಡಿಯುವ ನೀರು ಕೊಡಿ: ವಿಪಕ್ಷಗಳ ಪ್ರತಿಭಟನೆ

ಸುಳ್ಯ : ನಗರಕ್ಕೆ ಶುದ್ದ ಕುಡಿಯುವ ನೀರು ಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಸುಳ್ಯ ನಗರ ಪಂಚಾಯತ್ ಎದರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸಭೆಯನ್ನು ಉದ್ದೇಶಿ ಮಾತನಾಡಿದ ವಿಪಕ್ಷ ಸದಸ್ಯ ವೆಂಕಪ್ಪ ಗೌಡ, ಸುಳ್ಯ ಕಳೆದ ಅನೇಕ ದಿನಗಳಿಂದ ಕೆಸರು ನೀರು ಸೀಮೆಣ್ಣೆ ನೀರು ಸರಬರಾಜು ಆಗುತ್ತಿದೆ. ತಕ್ಷಣ ಶುದ್ದ ಕುಡಿಯುವ ನೀರು ಒದಗಿಸಬೇಕು. ಇಲ್ಲದಿದ್ದರೆ ಇಲ್ಲಿ ಆಡಳಿತ ನಡೆಸುತ್ತಿರುವವರಿಗೆ ಆಡಳಿತ ನಡೆಸುವುದಕ್ಕೆ ಯಾವುದೇ ಅರ್ಹತೆ ಇರುವುದಿಲ್ಲ. ಅಲ್ಲದೆ ಸುಳ್ಯ ನಗರದಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು ಅದಕ್ಕೂ ಸಮರ್ಪಕ‌ ವ್ಯವಸ್ಥೆಯಾಗಬೇಕು ಎಂದರು.

ವಿಪಕ್ಷ ಸದಸ್ಯ ಉಮ್ಮರ್ ಮಾತನಾಡಿ, ಸುಳ್ಯದ ಮೂಲಭೂತ ವ್ಯವಸ್ಥೆಗಳನ್ನು ತಕ್ಷಣ ಸರಿಪಡಿಸಬೇಕು.ಮೂಲಭೂತ ವ್ಯವಸ್ಥೆಗಳನ್ನು ಸರಿ ಮಾಡದಿದ್ದರೆ ನೀವು ಪ್ರಥಮವಾಗಿ ರಾಜಿನಾಮೆ ಕೊಟ್ಟು ಬನ್ನಿ. ಮತ್ತೆ ನಾವು ರಾಜಿನಾಮೆ ಕೊಡುತ್ತೇವೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನದಲ್ಲಿ ನಗರ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಪಕ್ಷ ಸದಸ್ಯರು ಪ್ರತಿಭಟನೆ ಸಭೆಯಲ್ಲಿ‌ ಹಾಜರಿದ್ದರು.

Related posts

NMC ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ, ವಿದ್ಯಾಮಾತಾ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮ ಹೇಗಿತ್ತು..?

8ನೇ ಸಲ ಏಷ್ಯಾ ಕಪ್ ಗೆದ್ದ ಭಾರತ, ಲಂಕಾಗೆ 10 ವಿಕೆಟ್‌ ಗಳ ಹೀನಾಯ ಸೋಲು

ಧರ್ಮಸ್ಥಳ : ಕೃಷಿ ವಿಸ್ತರಣಾ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ,ರೈತರಿಗೆ ಮತ್ತು ಕೃಷಿಯಂತ್ರಧಾರಾ ಕೇಂದ್ರಗಳಿಗೆ ಕೃಷಿ ಯಂತ್ರೋಪಕರಣಗಳ ಹಸ್ತಾಂತರ