Latestಸುಳ್ಯ

ಸುಳ್ಯ ಪ್ರೆಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ ಆಯ್ಕೆ, ಮಹಾಸಭೆಯಲ್ಲಿ ಪದಾಧಿಕಾರಿಗಳ ನೇಮಕ

457

ನ್ಯೂಸ್ ನಾಟೌಟ್: ಸುಳ್ಯ ಪ್ರೆಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ ಮುಂದಿನ ಎರಡು ವರ್ಷಕ್ಕೆ ಅವಿರೋಧವಾಗಿ ಇಂದು(ಎ.10) ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಈಶ್ವರ ವಾರಣಾಶಿ, ಜತೆ ಕಾರ್ಯದರ್ಶಿಯಾಗಿ ಹಸೈನಾರ್ ಜಯನಗರ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಹೇಮಂತ್ ಸಂಪಾಜೆ, ಹರೀಶ್ ಬಂಟ್ವಾಳ, ಲೋಕೇಶ್ ಪೆರ್ಲಂಪಾಡಿ, ಜಯಶ್ರೀ ಕೊಯಿಂಗೋಡಿ, ಗಂಗಾಧರ ಕಲ್ಲಪಳ್ಳಿ, ಸತೀಶ್ ಹೊದ್ದೆಟ್ಟಿ, ಯಶ್ವಿತ್ ಕಾಳಮ್ಮನೆ, ರಮೇಶ್ ನೀರಬಿದಿರೆ ಆಯ್ಕೆಯಾದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.

ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ವಾರ್ಷಿಕ‌ ವರದಿ ಮಂಡಿಸಿದರು. ಕೋಶಾಧಿಕಾರಿ ರಮೇಶ್ ನೀರಬಿದಿರೆ ಲೆಕ್ಕಪತ್ರ ಮಂಡಿಸಿದರು.

See also  ಸುಳ್ಯ: ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ, ಪ್ರತಿಯೊಬ್ಬರೂ ರಕ್ತದಾನ ಮಾಡಿ: ಡಾ| ಕೆ.ವಿ. ರೇಣುಕಾ ಪ್ರಸಾದ್ ಕರೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget