ಕರಾವಳಿಸುಳ್ಯ

ಸುಳ್ಯ. :ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆ ವತಿಯಿಂದ ‘ ಪ್ರವೇಗ ಆ್ಯನ್ವಲ್ ಸ್ಪೋರ್ಟ್ಸ್ ಮೀಟ್- 2023’;ವಿಜೇತರಿಗೆ ಮೆಡಲ್ ಮತ್ತು ಪ್ರಶಸ್ತಿ ವಿತರಣೆ

174

ನ್ಯೂಸ್ ನಾಟೌಟ್ :ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆ ವತಿಯಿಂದ ‘ಪ್ರವೇಗ ಆ್ಯನ್ವಲ್ ಸ್ಪೋರ್ಟ್ಸ್ ಮೀಟ್ 2023’ ಕಾರ್ಯಕ್ರಮ ಎನ್.ಎಂ.ಸಿ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ವಿ.ಜಿ. ಮೆಡಿಕಲ್ ಕಾಲೇಜು & ಆಸ್ಪತ್ರೆಯ ಡೀನ್ ನೀಲಾಂಬಿಕೈ ನಟರಾಜನ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು “ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ.ಸೋಲು-ಗೆಲುವುಗಳ ನಿರೀಕ್ಷೆ ಮಾಡದೇ ಭರವಸೆಯಿಂದ ನಿಮ್ಮ ಪ್ರತಿಭೆಯನ್ನು ಕ್ರೀಡೆಯಲ್ಲಿ ಪ್ರದರ್ಶಿಸಿ” ಎಂದು ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಸ್ಪೋರ್ಟ್ಸ್ ಕೋ ಆರ್ಡಿನೇಟರ್ ಡಾ. ರವಿಕಾಂತ್, ಸ್ತ್ರೀ ರೋಗ ತಜ್ಞೆ ಗೀತಾ ದೊಪ್ಪ, ಅಸಿಸ್ಟೆಂಟ್ ಪ್ರೊ.ಡಾ. ನಿತಿನ್, ಮತ್ತು ಪ್ರೊ.ಡಿ. ಮೈಕ್ರೋ ಬಾಯೋಲಜಿ ಮುಖ್ಯಸ್ಥೆ ನಮೃತಾ,ಇ.ಎನ್.ಟಿ ಮುಖ್ಯಸ್ಥೆ ಶ್ವೇತಾ, ಕಮಿಟಿ ಮೆಡಿಸಿನ್ ಆಫ್ ಹೆಚ್.ಓ.ಡಿ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ವಿಜೇತರಿಗೆ ಮೆಡಲ್ ಮತ್ತು ಪ್ರಶಸ್ತಿಯನ್ನು ವಿತರಿಸಲಾಯಿತು.

See also  ಬೆಳ್ಳಾರೆ: ಪ್ರತಿಭಾ ಕಾರಂಜಿಯಲ್ಲಿ ಆರ್ಯ ಎಸ್. ಕಳಂಜ ಪ್ರಥಮ, ತಾಲೂಕು ಮಟ್ಟಕ್ಕೆ ಆಯ್ಕೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget