ನ್ಯೂಸ್ ನಾಟೌಟ್: ಜನ ಸೇವೆಗೆ ಸದಾ ಸಿದ್ಧವಾಗಿರುವ ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ಮಾಲೀಕ ಅಚ್ಚುರವರು ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ.
ಸಂಪಾಜೆ, ಕಲ್ಲುಗುಂಡಿ, ಚೆಂಬು, ಗೂನಡ್ಕ ಭಾಗದ ಜನರ ಸೇವೆಗಾಗಿ ಹೊಸ ಆಂಬ್ಯುಲೆನ್ಸ್ ವೊಂದನ್ನು ತೆರೆದಿದ್ದಾರೆ. ಕಳೆದ 10 ವರ್ಷದಿಂದ ಆಂಬ್ಯುಲೆನ್ಸ್ ಸೇವೆಯಲ್ಲಿರುವ ಪ್ರಗತಿ ಅಚ್ಚುರವರು ನೂರಾರು ಕೊಳೆತ ಮೃತ ದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಸಂದರ್ಭಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ಪ್ರಶಸ್ತಿ-ಸನ್ಮಾನಗಳು ಅವರನ್ನು ಅರಸಿಕೊಂಡು ಬಂದಿದೆ. ಈಗಾಗಲೇ ಪ್ರಗತಿ ಆಂಬ್ಯುಲೆನ್ಸ್ ಸುಳ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಪಾಜೆ ಭಾಗದಲ್ಲಿ ಆರಂಭವಾಗಿರುವ ಹೊಸ ಆಂಬ್ಯುಲೆನ್ಸ್ ಪ್ರಗತಿ ಆಂಬ್ಯುಲೆನ್ಸ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.