ಕರಾವಳಿ

ಸುಳ್ಯ: ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ರಾತ್ರೋ ರಾತ್ರಿ ಎಂಟ್ರಿ..! ತಡರಾತ್ರಿ ಪೊಲೀಸ್ ಠಾಣೆ ಎದುರು ಹೈಡ್ರಾಮಾ..!

287

ನ್ಯೂಸ್ ನಾಟೌಟ್: ಅನ್ಯಕೋಮಿನ ಯುವಕ ಹಿಂದೂ ಹುಡುಗಿಯನ್ನು ಕಾರಲ್ಲಿ ಕೂರಿಸಿಕೊಂಡು ಹೋಗಿ ನೈತಿಕ ಪೊಲೀಸ್ ಗಿರಿಗೆ ತುತ್ತಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಡರಾತ್ರಿ ಪುತ್ತೂರಿನಿಂದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸುಳ್ಯ ಠಾಣೆಗೆ ಬಂದಿದ್ದಾರೆ. ಅರುಣ್ ಪುತ್ತಿಲ ಸುಳ್ಯಕ್ಕೆ ಬಂದಿರುವುದು ಸಹಜವಾಗಿಯೇ ಭಾರಿ ಅಚ್ಚರಿ ಮೂಡಿಸಿದೆ.

ಹಿಂದೂ ಯುವತಿಯ ಜೊತೆ ಕೇರಳ ಮೂಲದ ಅನ್ಯಕೋಮಿನ ಯುವಕನೊಬ್ಬ ಕಾರಿನಲ್ಲಿ ಸುತ್ತಾಟ ನಡೆಸುತ್ತಿದ್ದ. ಇದರಿಂದ ಅನುಮಾನಗೊಂಡ ಕೆಲವರು ವಾಹನವನ್ನು ತಡೆದು ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಅರಂತೋಡಿನಲ್ಲಿ ಜಮೀನನ್ನು ಲೀಸ್ ಗೆ ಪಡೆದುಕೊಂಡು ರಬ್ಬರ್ ಕೃಷಿಯಲ್ಲಿ ತೊಡಗಿದ್ದ ಕೇರಳ ಮೂಲದ ಯುವಕ ತನ್ನ ಸ್ನೇಹಿತೆ ಹಿಂದೂ ಯುವತಿ ಜೊತೆ ಕಾರಿನಲ್ಲಿ ಸುತ್ತಾಟ ಮೋಜು ಮಸ್ತಿ ಮಾಡಿಕೊಂಡಿದ್ದ. ಬಳಿಕ ಆಕೆಯನ್ನು ಬಸ್ ಹತ್ತಿಸಿ ಕೇರಳಕ್ಕೆ ವಾಪಸ್ ಕಳಿಸಿದ್ದ. ಹೀಗೆ ಆಕೆಯನ್ನು ಬಸ್ ಗೆ ಡ್ರಾಪ್ ಮಾಡಿ ವಾಪಸ್ ಬರುವಾಗ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಆತ ಸುಳ್ಯದಲ್ಲಿ ಯುವತಿಯನ್ನು ಬಸ್ ನಲ್ಲಿ ಬಿಟ್ಟು ತನ್ನ ಕಾರಿನಲ್ಲಿ ತೊಡಿಕಾನ ಕಡೆಗೆ ಬರುತ್ತಿದ್ದಾಗ ಕೆಲವು ಯುವಕರು ಅಡ್ಯಡ್ಕ ಸಮೀಪ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ತೀವ್ರ ಪೆಟ್ಟು ತಿಂದ ಯುವಕ ಸುಳ್ಯ ಠಾಣೆಗೆ ಬಂದು ದೂರು ನೀಡಿದ್ದಾನೆ, ಈ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸುಳ್ಯ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸುಳ್ಯ ಠಾಣೆಗೆ ಭೇಟಿ ನೀಡಿದ್ದಾರೆ.

ನ್ಯೂಸ್ ನಾಟೌಟ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಪ್ರಕರಣದಲ್ಲಿ ತಪ್ಪು ಮಾಡದೆ ಇರುವ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯ ಅರುಣ್ ಕುಮಾರ್ ಪುತ್ತಿಲ ಬಂದಿದ್ದಾರೆ ಎನ್ನಲಾಗುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರಿಗೆ ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಈ ಹಿಂದಿನ  ಪುತ್ತೂರು ವಿಧಾನ ಸಭಾ ಚುನಾವಣಾ ಕಣದಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ನ ಅಶೋಕ್ ರೈ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

See also  ಸಂಪಾಜೆ ಕಾಂಗ್ರೆಸ್ ನಲ್ಲಿ ಭಿನ್ನಮತ, ಮಾಜಿ ಅಧ್ಯಕ್ಷ ದಿಢೀರ್ ರಾಜೀನಾಮೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget