ಕರಾವಳಿ

ಸುಳ್ಯ: ಪರ ಸ್ತ್ರಿ ಜತೆ ಪತಿಯ ಸರಸ, ರಣ ಚಂಡಿಯಾದ ಪತ್ನಿ..!

ನ್ಯೂಸ್ ನಾಟೌಟ್: ಗಂಡ-ಹೆಂಡತಿ ನಡುವಿನ ಸಂಬಂಧ ಏಳೇಳು ಜನ್ಮದ ಅನುಬಂಧ ಅಂತ ಹೇಳ್ತಾರೆ. ಆದರೆ ಇಲ್ಲೊಬ್ಬ ಗಂಡ ಪರ ಸ್ತ್ರಿಯನ್ನು ಕರೆದುಕೊಂಡು ಬಂದು ಸುಳ್ಯದ ಲಾಡ್ಜ್‌ ನಲ್ಲಿ ತನ್ನ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಮಂಗಳೂರಿನ ವಿವಾಹಿತ ಯುವಕನೋರ್ವ ಪತ್ನಿಗೆ ತಿಳಿಯದಂತೆ ಬೇರೆಯೊಬ್ಬಳು ಯುವತಿಯನ್ನು ಸುಳ್ಯಕ್ಕೆ ಕರೆದುಕೊಂಡು ಬಂದಿದ್ದಾನೆ. ಇವರಿಬ್ಬರು ಸುಳ್ಯದ ಗಾಂಧಿನಗರದ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ತಂಗಿದ್ದಾರೆ. ಇಬ್ಬರ ನಡುವಿನ ಸರಸ ಸಲ್ಲಾಪದ ಸುದ್ದಿಯನ್ನು ಅದು ಹೇಗೋ ತಿಳಿದುಕೊಂಡು ಬಂದ ಪತ್ನಿ ರಣಚಂಡಿಯಾಗಿ ಸುಳ್ಯದ ಪೇಟೆಯಲ್ಲಿಯೇ ಗಂಡ ಮತ್ತು ಯುವತಿಯ ಮಾನ ಮರ್ಯಾದೆಯನ್ನು ಹರಾಜು ಹಾಕಿದ್ದಾಳೆ. ಲಾಡ್ಹ್ ಎದುರಲ್ಲೇ ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಪತ್ನಿಯ ಬೈಗುಳ ತಾರಕಕ್ಕೆ ಏರುತ್ತಿದ್ದಂತೆ ಸುತ್ತಮುತ್ತ ಜನ ಸೇರಿದ್ದಾರೆ. ಈ ವೇಳೆ ಆಕ್ರೋಶಗೊಂಡ ಪತ್ನಿ ಪತಿಯ ಜತೆಗಿದ್ದ ಯುವತಿಯ ಜಡೆ ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾಳೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಉಡುಪಿ:ತೆಲುಗಿನ ಖ್ಯಾತ ನಟಿ,ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಕೃಷ್ಣ ಮಠಕ್ಕೆ ಭೇಟಿ..!ಕರಾವಳಿಗೆ ಭೇಟಿ ನೀಡಿದ ಉದ್ದೇಶವೇನು?

ಜೂನ್‌ 12ರಂದು HSRP ನಂಬರ್ ಪ್ಲೇಟ್ ಅಳವಡಿಕೆಗೆ ಅಂತಿಮ ದಿನ, ಅಳವಡಿಕೆ ಮಾಡದ ವಾಹನ ಸವಾರರಿಗೆ ಬೀಳಲಿದೆ ಭಾರಿ ದಂಡ

ಮಂಗಳೂರು: ಕಂಕನಾಡಿ ನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ನಾಪತ್ತೆ,ಮೊಬೈಲ್ ಲೊಕೇಶನ್ ಆಧಾರದ ಮೇಲೆ ಹುಡುಕಾಟ..!