ಕರಾವಳಿ

ಸುಳ್ಯ: ಪತ್ನಿ ಕೊಲೆಗೆ ಯತ್ನಿಸಿದ ಪತಿಯ ಬಂಧನ, ಹೆಂಡತಿಗೆ ಕಿರುಕುಳ ನೀಡಿದ ಕಿರಿಕ್ ಪತಿ ಅರೆಸ್ಟ್ ಆಗಿದ್ದು ಹೇಗೆ..?

ನ್ಯೂಸ್ ನಾಟೌಟ್: ಗಂಡ -ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನುವ ಮಾತಿದೆ. ಆದರೆ ಇಲ್ಲೊಬ್ಬ ಪತಿ ಮಹಾರಾಯ ಪತ್ನಿಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿ ಈಗ ಅರೆಸ್ಟ್ ಆಗಿದ್ದಾನೆ.

ಅಜ್ಜಾವರ ಗ್ರಾಮದ ಮೇನಾಲದ ಇರಂತಮಜಲು ಎಂಬಲ್ಲಿ ಅಬ್ದುಲ್ ನವಾಝ್ ಎಂಬ ಯುವಕ ಮೂರು ವರ್ಷಗಳ ಹಿಂದೆ ರಿಹಾ ಫಾತಿಮಾ ಅನ್ನುವವರನ್ನು ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಅನ್ಯೂನ್ಯತೆ ತುಂಬಿ ತುಳುಕಿತ್ತು. ಆದರೆ ಇತ್ತೀಚೆಗೆ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಹಲ್ಲೆ ಮಾಡುವ ತನಕ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಸುಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿ ಪತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಪ್ರಕಾರವಾಗಿ ನೋಡುವುದಾದರೆ ಮೊದಲನೆಯದಾಗಿ ಆಕೆಗೆ ವರದಕ್ಷಿಣೆ ಕಿರುಕುಳವನ್ನು ನೀಡಲಾಗಿದೆ. ಪ್ರತಿ ದಿನವೂ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಹಲ್ಲೆಯ ವೇಳೆ ತಲೆ ದಿಂಬಿನಿಂದ ಮುಖಕ್ಕೆ ಒತ್ತಿ ಹಿಡಿಯಲಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಕೃತವಾದ ವರ್ತನೆಯನ್ನೂ ತೋರಲಾಗಿದೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರು ನೀಡಿರುವ ಮಹಿಳೆಯ ತಂದೆಗೆ ಕೊಲೆ ಬೆದರಿಕೆಯನ್ನು ಬಂಧಿತ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ನೀಡಿದ ದೂರಿನ ಪ್ರಕಾರವಾಗಿ ಸುಳ್ಯ ಪೊಲೀಸರು ಆರೋಪಿ ಅಬ್ದುಲ್ ನವಾಝ್ ನನ್ನು ಬಂಧಿಸಿ ಗುರುವಾರ (ಇಂದು ಆ.3) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

Related posts

ಪುತ್ತೂರು ಮೂಲದ ಯುವತಿ ಬೆಂಗಳೂರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ

ಇಂದಿನಿಂದ ಹಾಲು, ಮೊಸರು ದರ ಹೆಚ್ಚಳ, ಎಷ್ಟು ರೇಟು ಏರಿದೆ? ಇಲ್ಲಿದೆ ಪಕ್ಕಾ ಲೆಕ್ಕ

ಮೋದಿ ಕುರಿತ ಖರ್ಗೆ ಹೇಳಿಕೆಗೆ ಖಂಡನೆ : ದೇಶಕ್ಕೆ ತೋರಿದ ಅವಮಾನವೆಂದ ವಿ.ಸುನೀಲ್ ಕುಮಾರ್