ಕ್ರೈಂವೈರಲ್ ನ್ಯೂಸ್ಸುಳ್ಯ

ಅಜ್ಜನ ಮನೆಗೆ ಬಂದಿದ್ದ 4ನೇ ತರಗತಿ ಬಾಲಕ ಸುಳ್ಯದಿಂದ ನಾಪತ್ತೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ತಂದೆ

258

ನ್ಯೂಸ್ ನಾಟೌಟ್ : ಸುಳ್ಯದಿಂದ ಬಾಲಕನೊಬ್ಬ ಕಳೆದ ಆರು ದಿನಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದಾನೆ. ಬಾಲಕ ಮೂಲತಃ ಪುತ್ತೂರಿನವ. ಈತನ ತಂದೆ ಇಸ್ಮಾಯಿಲ್ ಮಾಡ್ನೂರು ಗ್ರಾಮದವರಾಗಿದ್ದಾರೆ. ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಯಲ್ಲಿ 4 ನೇ ತರಗತಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಫೆಬ್ರವರಿ 2ರಂದು ಶಾಲೆಗೆ ರಜೆ ಇದ್ದುದರಿಂದ ಅಪ್ರಾಪ್ತ ವಯಸ್ಸಿನ ಬಾಲಕ ಅಹಮ್ಮದ್ ಶಾಜಿದ್ ಎನ್ ಎಂಬಾತ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿರುವ ಅಜ್ಜನ ಮನೆಗೆ ಬಂದಿದ್ದಾನೆ. ಫೆಬ್ರವರಿ 3ರಂದು ಸಂಜೆ ೫ ಗಂಟೆಗೆ ಬಾಲಕ ಸುಳ್ಯದ ಕಂಪ್ಯೂಟರ್ ಅಂಗಡಿಗೆ ಹೋಗಿ ನಂತರ ಮಾಡ್ನೂರಿಗೆ ಹಿಂತಿರುಗಿ ಬರುವುದಾಗಿ ಫೋನ್ ನಲ್ಲಿ ತನ್ನ ಮನೆಗೆ ತಿಳಿಸಿ ಅರಂಬೂರು ಬಳಿ ಇರುವ ಅಜ್ಜನ ಮನೆಯಿಂದ ಹೊರಟ್ಟಿದ್ದಾನೆ.

ಹಾಗೆ ಹೊರಟಿದ್ದ ಅಹಮ್ಮದ್ ಶಾಜಿದ್ ರಾತ್ರಿಯಾದರೂ ತನ್ನ ಮನೆಗೆ ಬಾರದೆ ಇದ್ದುದರಿಂದ ಮನೆಯವರು ಆತಂಕಕ್ಕೀಡಾಗಿದ್ದಾರೆ. ಸಮೀಪದ ಬಂದುಗಳ ಮನೆಗೆ ಹೋಗಿರಬಹುದು ಎಂದು ಎಲ್ಲ ಕಡೆ ವಿಚಾರಿಸಿದ್ದಾರೆ. ಆದರೆ ಎಲ್ಲೂ ಆತ ಪತ್ತೆಯಾಗದ ಹಿನ್ನೆಲೆಯಲ್ಲಿ ಶಾಜಿದ್ ತಂದೆ ಸುಳ್ಯ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಇದೀಗ ಪೊಲೀಸರು ಅ.ಕ್ರ: 18/2024 ಕಲಂ 363 ಐಪಿಸಿ ಪ್ರಕಾರ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

See also  ನಟ ದರ್ಶನ್‌ ಗೆ ಆಗಸ್ಟ್‌ 14ರ ವರೆಗೆ ಜೈಲೇ ಗತಿ..! ಅಧಿಕಾರಿಗಳು ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ಏನಿತ್ತು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget