ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನಾದ್ಯಂತ ಭಾನುವಾರ ತಡರಾತ್ರಿ ರೌಡಿಶೀಟರ್ಸ್ ಮನೆಗಳ ಮೇಲೆ ಪೊಲೀಸ್ ದಾಳಿ ನಡೆದಿದೆ ಎಂಬ ವಿಚಾರ ಹೊರಬಿದ್ದಿದೆ.
ಸ್ವತಃ ಪೊಲೀಸ್ ಮೂಲಗಳು ಈ ವಿಚಾರವನ್ನು ನ್ಯೂಸ್ ನಾಟೌಟ್ ಗೆ ಖಚಿತಪಡಿಸಿವೆ.
ಸುಮಾರು ರಾತ್ರಿ 11 ಗಂಟೆ ಸುಮಾರಿಗೆ ದಾಳಿ ನಡೆದಿದೆ ಎನ್ನಲಾಗಿದೆ. ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಮನೆಗಳ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನೂ ಕೆಲವರ ಅಂಗಡಿಗಳ ಮೇಲೆಯೂ ದಾಳಿಯಾಗಿದೆ ಎನ್ನಲಾಗಿದೆ. ಯಾವುದಾದರೂ ಮಾರಕ ಆಯುಧಗಳನ್ನು ಇಟ್ಟುಕೊಂಡಿದ್ದರೇ ಅನ್ನುವುದರ ಕುರಿತು ಪೊಲೀಸರು ತಪಾಸಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಸುಳ್ಯ, ಸಂಪಾಜೆ, ಸುಬ್ರಹ್ಮಣ್ಯಗಳಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.