ನ್ಯೂಸ್ ನಾಟೌಟ್: ಸುಳ್ಯದ ಆಟೋ ಚಾಲಕ ಶೇರಾಜ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸುಳ್ಯದ ಮತ್ತೋರ್ವ ಆಟೋ ಚಾಲಕ ಆತ್ಮಹತ್ಯೆ ಗೆ ಯತ್ನ ನಡೆಸಿರುವ ಘಟನೆ ಭಾನುವಾರ (ಏ.13) ನಡೆದಿದೆ.
ವಿಷ ಸೇವಿಸಿದವರನ್ನು ಅನೀಶ್ ಡಿ ಸೋಜಾ 30 ವರ್ಷ ಎಂದು ಗುರುತಿಸಲಾಗಿದೆ. ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆ ಹಾಗೂ ಕೆವಿಜಿ ಆಸ್ಪತ್ರೆಯಲ್ಲಿ ಉಪಚರಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ