ಸುಳ್ಯ

ಪೆರಾಜೆ: ನಿಲ್ಲಿಸಿದ ಲಾರಿಯ ಟೈರ್ ಅನ್ನೇ ಎಗರಿಸಿದ ಕಳ್ಳರು..! ಅಂಗಡಿ, ಮನೆ ಆಯ್ತು, ಈಗ ನಿಲ್ಲಿಸಿದ ಲಾರಿಯನ್ನೂ ಬಿಡದ ದೂರ್ತರು..!

147

ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಮನೆಗೆ, ಅಂಗಡಿಗೆ ನುಗ್ಗಿ ಕಳ್ಳರು ನುಗ್ಗಿ ಕಳ್ಳತನ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ನಿಲ್ಲಿಸಿದ ಲಾರಿಯ ಟೈರ್ ಅನ್ನೇ ಕದ್ದುಕೊಂಡು ಹೋಗಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರೋದು ಪೆರಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ, ಅಲ್ಲಿ ವಾರಗಳಿಂದ ನಿಲ್ಲಿಸಿದ್ದ ಲಾರಿಯ ಹಿಂಬದಿ ಟೈರ್ ಅನ್ನೇ ಕಳ್ಳರು ಎಗರಿಸಿದ್ದಾರೆ.

ಇದು ಟಿಂಬರ್ ಲೋಡ್ ಮಾಡುವ ಲಾರಿ, ಹೆಚ್ಚಿನ ದಿನ ಪೆರಾಜೆಯ ಬಳಿಯೇ ಬಂದು ನಿಲ್ಲುತ್ತಿತ್ತು. ವಾರಗಟ್ಟಲೆ ಅಲ್ಲಿ ನಿಂತಿದ್ದೂ ಇದೆ. ಆದರೆ ಹೀಗೆ ಟೈರ್ ಅನ್ನು ಕದಿಯುತ್ತಾರೆ ಅನ್ನುವ ಯಾವ ಕಲ್ಪನೆಯೂ ಅದರ ಮಾಲೀಕರಿಗೆ ಇದ್ದಿರಲಿಕ್ಕಿಲ್ಲ. ಮೂರು ದಿನಗಳ ಹಿಂದೆ ಘಟನೆ ನಡೆದಿದೆ. ಇದೀಗ ವಾಹನ ಮಾಲೀಕರ ಗಮನಕ್ಕೆ ಬಂದಿದೆ. ಲಾರಿಯ ಮಾಲೀಕರು ಕೇರಳ ಮೂಲದವರು, ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಳ್ಯದ ಹಲವು ಕಡೆ ನಿರಂತರವಾಗಿ ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದು ಪೊಲೀಸರ ಭಯ ಕೂಡ ಇಲ್ಲ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

See also  ಸಂಪಾಜೆ: ಅಕ್ರಮ ದನ ಸಾಗಾಟದ ಶಂಕೆ, ಮಿನಿ ಲಾರಿಯನ್ನು ತಡೆದು ನಿಲ್ಲಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget