ಕೊಡಗುಸುಳ್ಯ

ಭಾಗಮಂಡಲ: ಹೊಸ ವರ್ಷಕ್ಕೆ ಮೀಸಲು ಅರಣ್ಯದಲ್ಲಿ ಪಾರ್ಟಿ ಮಾಡಲು ಹೋಗಿ ಅವಾಂತರ..! ಸುಳ್ಯ, ಪೆರಾಜೆ, ಅರಂತೋಡು ಸೇರಿದಂತೆ ವಿವಿಧ ಭಾಗದ 40 ಯುವಕರು ಅರಣ್ಯ ಇಲಾಖೆ ವಶಕ್ಕೆ

178

ನ್ಯೂಸ್ ನಾಟೌಟ್: ಹೊಸ ವರ್ಷ 2025 ಅನ್ನು ಎಲ್ಲರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಹಾಗೆ ಸ್ವಾಗತಿಸಲು ಗುಡ್ಡೆ ಹತ್ತಿದ ಯುವಕರನ್ನು ಭಾಗಮಂಡಲದ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಸುಳ್ಯ, ಪೆರಾಜೆ, ಅರಂತೋಡಿನ ಯುವಕರು ಹೊಸ ವರ್ಷಕ್ಕೆ ಮೋಜು- ಮಸ್ತಿ ಮಾಡುವುದಕ್ಕಾಗಿ ತೊಡಿಕಾನ ಸಮೀಪದ ಭಾಗಮಂಡಲ ರೇಂಜ್ ನ ಕೋಳಿಕಲ್ಲು ಮಲೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.

ಈ ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಅವರನ್ನು ಬಿಡಿಸಲು ಕೆಲವು ಮುಖಂಡರು ಅಲ್ಲಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.

See also  ಪೆರಾಜೆ: ನಿಲ್ಲಿಸಿದ ಲಾರಿಯ ಟೈರ್ ಅನ್ನೇ ಎಗರಿಸಿದ ಕಳ್ಳರು..! ಅಂಗಡಿ, ಮನೆ ಆಯ್ತು, ಈಗ ನಿಲ್ಲಿಸಿದ ಲಾರಿಯನ್ನೂ ಬಿಡದ ದೂರ್ತರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget