Latestಕರಾವಳಿಸುಳ್ಯ

ಸುಳ್ಯ: ಪಯಸ್ವಿನಿ ಸೀನಿಯರ್ ಲೀಜನ್ ಮಾಸಿಕ ಸಭೆ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

352

ನ್ಯೂಸ್ ನಾಟೌಟ್: ಸುಳ್ಯ ಪಯಸ್ವಿನಿ ಸೀನಿಯರ್ ಲೀಜನ್ ಮಾಸಿಕ ಸಭೆ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಏಪ್ರಿಲ್ 29ರಂದು ಸುಳ್ಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್‌ನಲ್ಲಿ ಚಂದ್ರಶೇಖರ್ ನಂಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುಳ್ಯ ಪಯಸ್ವಿನಿ ಸೀನಿಯರ್ ಲೀಜನ್ ನ ಮಾಸಿಕ ಸಭೆಯಲ್ಲಿ ಸುಳ್ಯ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಕೆ.ಎಂ.ಮುಸ್ತಾಫ, ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ಮಹಾ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡ ಚಂದ್ರ ಕೋಲ್ಚಾರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಕುಲದಾಸ ಇವರನ್ನು ಸೀನಿಯರ್ ಲೀಜನ್ ವತಿಯಿಂದ ಹಿರಿಯ ಜೇಸಿ ಧನಂಜಯ ಮದುವೆಗದ್ದೆ, ಕೆ.ಆರ್ ಗಂಗಾಧರ್ ಹಾಗೂ ಎಸ್.ಆರ್ ಸೂರಯ್ಯರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಅಭಿನಂದನಾ ಭಾಷಣದೊಂದಿಗೆ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಪಯಸ್ವಿನಿ ಸೀನಿಯರ್ ಲೀಜನ್ ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆತು. ಸೀನಿಯರ್ ಜಯಪ್ರಕಾಶ ಕಾನತ್ತಿಲ ನೂತನ ಅಧ್ಯಕ್ಷರಾಗಿ, ದಿನೇಶ್ ಅಂಬೆಕಲ್ಲು ಉಪಾಧ್ಯಕ್ಷರಾಗಿ, ದೇವಿಪ್ರಸಾದ್ ಕುದ್ಪಾಜೆ ಕಾರ್ಯದರ್ಶಿಯಾಗಿ, ಕೆ.ಟಿ.ವಿಶ್ವನಾಥ, ಖಜಾಂಜಿಯಾಗಿ ಹಾಗೂ ನಿರ್ದೇಶಕರುಗಳಾಗಿ ಅಶೋಕ ಚೂಂತಾರು, ಮೋಹನ್.ಎ.ಕೆ, ಸೀತಾರಾಮ ಕೇವಳ, ಎಸ್.ಆರ್.ಸೂರಯ್ಯ, ಚಂದ್ರಶೇಖರ ಪೇರಾಲು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿ.ಪೂ ಅಧ್ಯಕ್ಷ ಸೀನಿಯರ್ ಪಿ.ಎಸ್.ಗಂಗಾಧರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಖಜಾಂಜಿ ಅಶೋಕ ಚೂಂತಾರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಮೋಹನ್ ಎ.ಕೆ ವಂದನಾರ್ಪಣೆಗೈದರು.

 

See also  ಕೇಂದ್ರ ಸಚಿವೆಯ ಅಪ್ರಾಪ್ತ ಮಗಳಿಗೆ ಜಾತ್ರೆಯಲ್ಲಿ ಯುವಕರಿಂದ ಕಿರುಕುಳ..! ಭದ್ರತಾ ಸಿಬ್ಬಂದಿಯ ಕಾಲರ್ ಹಿಡಿದು ಬೆದರಿಸಿದ ಆರೋಪಿಗಳು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget