Uncategorized

ಜು.26ಕ್ಕೆ ಪತ್ರಿಕಾ ದಿನಾಚರಣೆ ಹಾಗೂ ಆಟಿ ಆಚರಣೆ

ನ್ಯೂಸ್ ನಾಟೌಟ್: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ವತಿಯಿಂದ ಜು.26ಕ್ಕೆಸುಳ್ಯದ ರಂಗಮಯೂರಿ ಕಲಾ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಆಟಿ ಆಚರಣೆ ಕಾರ್ಯಕ್ರಮ ನಡೆಯಲಿದೆ.

ಸುಳ್ಯ ತಾಲೂಕು ಕೆಜೆಯು ಅಧ್ಯಕ್ಷ ಜೆ.ಕೆ.ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿತು ನಿಡ್ಲೆ ಕ್ಷೇತ್ರ ಪ್ರಚಾರಾಧಿಕಾರಿ ಕೇಂದ್ರ ಸಂವಹನ ಶಾಖೆ ಸಮಾಚಾರ ಮತ್ತು ಪ್ರಸಾರ ಸಚಿವಾಲಯ ಮಂಗಳೂರು ಇವರು ಕಾರ್ಯಕ್ರಮದ ಉದ್ಘಾಟನೆ ನಡೆಸಲಿದ್ದಾರೆ. ಕೇಪು ಅಜಿಲ ಆಟಿ ಚರಣೆಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಸನ್ಮಾನ ಕಾರ್ಯಕ್ರಮವೂ ನಡೆಯುವುದಿದೆ. ಪತ್ರಕರ್ತ ಲಕ್ಷ್ಮಣ್ ಕುಂದರ್, ಹಿರಿಯ ಪತ್ರಕರ್ತ ಹಾಗೂ ಕೆಜೆಯು ದ.ಕ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಕೆಜೆಯು ದ.ಕ.ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ತಾರನಾಥ್ ಗಟ್ಟಿ ಕಾಪಿಕಾಡ್, ಕೆಜೆಯು ಸುಳ್ಯ ತಾಲೂಕು ಗೌರವಾಧ್ಯಕ್ಷ ಉಮೇಶ್ ಮಣಿಕ್ಕಾರ್‌ ಮತ್ತಿತರರು ಉಪಸ್ಥಿತರಿರಲಿದ್ದಾರೆ.

Related posts

ಈತ ಪ್ರತಿನಿತ್ಯ ವಿಷಕಾರಿ ಕಾಳಿಂಗ ಸರ್ಪವನ್ನು ಸ್ನಾನ ಮಾಡಿಸ್ತಾನೆ..!

ಸುಳ್ಯ: ಮಂಗಳೂರಿನಲ್ಲಿ ಪಾರ್ಕ್ ಮಾಡಿದ್ದ ಜಾಲ್ಸೂರಿನ ಮಹಿಳೆಯ ಸ್ಕೂಟಿ ನಾಪತ್ತೆ, ರಾತ್ರಿ ಇಟ್ಟದ್ದು ಬೆಳಗಾಗುವಾಗ ಮಂಗಮಾಯ..!

ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ಪ್ರೀತಿಸಿ ಪೇಚಿಗೆ ಸಿಲುಕಿದ ಯುವಕ..! ಲಾಟ್ರಿ ಎತ್ತಿ ಹುಡುಗನ ಆಯ್ಕೆ ಮಾಡಿದ ಊರವರು..!