ನ್ಯೂಸ್ ನಾಟೌಟ್: ಯುವಕನೊಬ್ಬ ಪಾಮ್ ಆಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಳ್ಯದ ಗಾಂಧಿನಗರದಿಂದ ವರದಿಯಾಗಿದೆ.
ಅಕ್ಟೋಬರ್ 31ರಂದು ತಡರಾತ್ರಿ ಗಾಂಧಿನಗರದಲ್ಲಿ ಗೋವಿಂದ ಎಂಬ ಉತ್ತರ ಕರ್ನಾಟಕ ಮೂಲದ ಯುವಕನೊಬ್ಬನಿಗೆ ತನ್ನ ಪರಿಚಿತರ ಜೊತೆಗೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ವಿಪರೀತ ಮಟ್ಟಕ್ಕೆ ಹೋಗಿದೆ. ಈ ವೇಳೆ ಸಿಟ್ಟಿನಿಂದ ಗೋವಿಂದ ಪಾಮ್ ಆಯಿಲ್ ಕುಡಿದಿದ್ದಾನೆ. ನಂತರ ಈತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆತನನ್ನು ಪರೀಕ್ಷಿಸಿದ ವೈದ್ಯರು ಕುಡಿದಿದ್ದನ್ನು ಕಕ್ಕಿಸಿದ್ದಾರೆ. ಅಂತಿಮವಾಗಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮದ್ಯಪಾನದಿಂದ ಗಲಾಟೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.