ಕ್ರೈಂ

ಸುಳ್ಯ: NMC ಹಳೆ ವಿದ್ಯಾರ್ಥಿ ಹಠಾತ್ ನಿಧನ, ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ ಉದ್ಯೋಗಿಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಉದ್ಯೋಗಿ ವಿಜಯ್ ಚಂದ್ರ ಭಾನುವಾರ (ಆ.೨೦) ನಿಧನರಾಗಿದ್ದಾರೆ.

ಅವರಿಗೆ 39 ವರ್ಷ ವಯಸ್ಸಾಗಿತ್ತು. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಲೆಟ್ಟಿ ಗ್ರಾಮದ ಕುಂಭಕೋಡು ನಿವಾಸಿ ವಿಜಯ್ ಚಂದ್ರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ತಂದೆ, ತಾಯಿ, ಸಹೋದರರಾದ ವಿನಯ್ ಚಂದ್ರ, ಅಜಯ್ ,ಮುರಳಿ ಕುಂಭಕೋಡು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ವಿಜಯ್ ಚಂದ್ರ ಅವಿವಾಹಿತರಾಗಿದ್ದರು. ಕಾಲೇಜು ದಿನಗಳಿಂದಲೇ ಹಾಸ್ಯದ ಮೂಲಕವೇ ಸುತ್ತಲಿನ ಮಿತ್ರರ ಹೃದಯ ಗೆದ್ದಿದ್ದರು. ಮೃದು ಸ್ವಭಾವದ ವಿಜಯ್ ಚಂದ್ರ ಇದ್ದಲ್ಲಿ ನಗು ಸದಾ ಸುತ್ತುತ್ತಿತ್ತು. ಅಂತಹ ಸ್ನೇಹಿತನ ಕಳೆದುಕೊಂಡ ಮಿತ್ರ ವರ್ಗ ಇದೀಗ ಅತೀವ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ.

Related posts

ದೂರು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಿಟಿ ರವಿ ವಿರುದ್ಧ ಎಫ್.​ಐ.ಆರ್ ದಾಖಲು..! ಕೊಲೆಗೆ ಸಂಚು ಎಂದು ಹೆಬ್ಬಾಳ್ಕರ್ ವಿರುದ್ಧವೂ ಪ್ರತಿ ದೂರು..!

ಎತ್ತಿನಹೊಳೆ ಯೋಜನೆ ಲೋಕಾರ್ಪಣೆಗೆ ಸಿಎಂ ಜೊತೆ ಹೊರಟ ವಾರ್ತಾ ಇಲಾಖೆಯ ವಾಹನದ ಬ್ರೇಕ್ ಫೇಲ್..! ಪತ್ರಕರ್ತರ ವಾಹನ ಲಾರಿಗೆ ಡಿಕ್ಕಿ..!

ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳ ಪಾತ್ರೆ, ಬಟ್ಟೆ ತೊಳೆದು, ನೆಲ ಒರಸಿ, ಪತ್ರ ಬರೆದಿಟ್ಟು ಹೋಗಿದ್ದ..! ಆದರೂ ಕಳ್ಳನಿಗೆ 22 ತಿಂಗಳ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ..!