ಸುಳ್ಯ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ

ನ್ಯೂಸ್ ನಾಟೌಟ್: ಮನುಷ್ಯನ ಜೀವಿತಾವಧಿಯಲ್ಲಿ ವಿದ್ಯಾರ್ಥಿ ಜೀವನ ತುಂಬಾ ಮುಖ್ಯವಾದುದು. ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ವಿದ್ಯಾರ್ಜನೆಯೊಂದಿಗೆ ಶಿಸ್ತು ಹಾಗೂ ಗುರಿ ಬಹಳ ಮುಖ್ಯ ಎಂದು ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ನ ಕಾರ್ಯದರ್ಶಿ ಹೇಮನಾಥ್ ಕೆ.ವಿ. ಅಭಿಪ್ರಾಯಪಟ್ಟರು.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶನಿವಾರ (ಆ.10 ) ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಓರಿಯಂಟೇ‍ಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳ ಜತೆಗೆ ಪದವಿ ಪಡೆಯುವುದರೊಂದಿಗೆ ಸುಶಿಕ್ಷಿತ ನಾಗರಿಕರಾಗಿ ಸಮಾಜ ಗುರುತಿಸುವ ಕೆಲಸ ಮಾಡಬೇಕು ಎಂದರು.

ಬಳಿಕ ವಿದ್ಯಾರ್ಥಿಗಳ ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ.ಎಂ. ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. IQAC ನಿರ್ದೇಶಕಿ ಡಾ. ಮಮತಾ ಕೆ. ಕಾಲೇಜಿನ ನೀತಿ ನಿಯಮಗಳನ್ನು ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ವಿವರಿಸಿದರು. ಉಪನ್ಯಾಸಕಿ ಕೃತಿಕಾ ಪ್ರಾರ್ಥಿಸಿದರು., ಭವ್ಯ ರಜತ್ ಕಾರ್ಯಕ್ರಮ ನಿರೂಪಿಸಿದರು. ಡಾ. ಮಮತಾ ಕೆ. ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಸುಳ್ಯ: 52 ನೇ ವರ್ಷದ ‘ಶ್ರೀ ಶಾರದಾಂಬ ಉತ್ಸವ-2023’ ಕ್ಕೆ ಭರ್ಜರಿ ಸಿದ್ಧತೆ,ಶಾಸಕಿ ಕು.ಭಾಗೀರಥಿ ಮುರುಳ್ಯ ರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಾಲ್ಯ ವಿವಾಹದ ಬಲೆಗೆ ಸಿಲುಕಿದ ಬಾಲಕಿ..!ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ..!

ಚೆಂಬು: ಆಸ್ತಿಗಾಗಿ ಗಲಾಟೆ, ಸಹೋದರನನ್ನೇ ಭೀಕರವಾಗಿ ಚೂರಿಯಿಂದ ಚುಚ್ಚಿ ಕೊಲೆ