ನ್ಯೂಸ್ ನಾಟೌಟ್ :ಅಕ್ಷಯ ಕಾಲೇಜು ಸಂಪ್ಯ ಪುತ್ತೂರು ಇಲ್ಲಿ ನಡೆದ ‘AETERNUS’ ಸ್ಪರ್ಧೆಗಳಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜು ತಂಡ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ, ಜೊತೆಗೆ ಸ್ಪೆಷಲ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಇಂಗ್ಲೀಷ್ ಕವಿತೆ ರಚನೆಯಲ್ಲಿ ಆಯಿಷತ್ ಅಸ್ನ ಪ್ರಥಮ ಸ್ಥಾನ ಪಡೆದಿದ್ದಾರೆ. ‘ಅಡ್ವರ್ಟೈಜ್ ಮೆoಟ್’ ಸ್ಪರ್ಧೆಯಲ್ಲಿ ಶ್ರೇಯಸ್ ಕೆ , ಸುಮಿತ್ ಕಾಟೂರು, ಜೋಸೆಫ್ ಪ್ರಾನ್ಸಿಸ್, ಯೋಗಿತ್ ಎ ಪಿ ಸೇರಿದಂತೆ 4 ಮಂದಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಸಪ್ರಶ್ನೆಯಲ್ಲಿ ಸುಮಂತ್ ಎಂ ಆರ್, ಕೃತ ಸ್ವರ ದೀಪ್ತ ಕೆ, ಅಮೋಘ ಎಂ ಎಸ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭೂಮಿಕಾ ಆರ್ ಕೆ, ಮನ್ವಿತಾ ಎ ವಿ, ರಿಯಾ ಸಂದೀಪ್ ಯಾದವ್, ರಿಯಾ ಕೆಜೆ, ಹಿತಾಶ್ರೀ ಕೆ ಐ, ಕೆ ಜೆ ನೇಹಾ, ಶಾನಿಕ ವೈ ಕೆ, ಪ್ರಣಮ್ಯ ಕೆ ಎಸ್ ತೃತೀಯ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ಶ್ರೇಯ ಎಂ ಜೆ ತೃತೀಯ ಸ್ಥಾನ ಗಳಿಸಿದ್ದಾರೆ.
ಬಹುಮಾನ ನಗದು, ಪ್ರಶಸ್ತಿ ಪತ್ರ, ಟ್ರೋಫಿ ಒಳಗೊಂಡಿದೆ. ವಿಜೇತ ವಿದ್ಯಾರ್ಥಿಗಳನ್ನು ‘NMPUC’ಯ ಆಡಳಿತ ಮಂಡಳಿ, ಪ್ರಾoಶುಪಾಲರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
Click