ಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆ ಉದ್ಘಾಟನೆ

ನ್ಯೂಸ್ ನಾಟೌಟ್ : ರೆಡ್‌ಕ್ರಾಸ್ ಸಂಸ್ಥೆ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದು, ಅದರ ಧ್ಯೇಯೋದ್ದೇಶ ಅರಿತು ಸೇವಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಎಂದು ಸುಳ್ಯದ ಪ್ರಭಾರ ತಹಶೀಲ್ದಾರ್‌ ಮಂಜುನಾಥ್ ಎಂ. ಅಭಿಪ್ರಾಯಪಟ್ಟರು.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಹಮ್ಮಿಕೊಂಡ ಯುವ ರೆಡ್‌ಕ್ರಾಸ್ ಘಟಕದ 2024-25ನೇ ಸಾಲಿನ ವಾರ್ಷಿಕ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಕಾರ್ಯದರ್ಶಿ ಹೇಮನಾಥ್ ಕೆ.ವಿ. ಮಾತನಾಡಿ, ಮಾನವನ ದುರಾಸೆಯಿಂದಲೇ ಇಂದು ಬಹಳಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಯುವ ಜನತೆ ಅಂತ ಕೆಟ್ಟ ಚಟುವಟಿಕೆಗಳಿಂದ ಮುಕ್ತಿಹೊಂದಿ ಸುಖ ಜೀವನ ಕಟ್ಟಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ., ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲ್, ಪೊಲೀಸ್ ಕಾನ್ ಸ್ಟೇಬಲ್‌ಗಳಾದ ಜ್ಯೋತಿ ಕೆವಿ ಹಾಗೂ ದಿನೇಶ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕ ಮಾತನಾಡಿ, ರೆಡ್‌ಕ್ರಾಸ್ ಘಟಕವನ್ನು ಮತ್ತೆ ಕಟ್ಟುವಲ್ಲಿ ಎಲ್ಲರ ಸಹಕಾರ ಕೋರಿ ಘಟಕದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ದೊರೆಯುವ ಮಾಹಿತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಸಂಜೀವ ಕುದ್ಪಾಜೆ, ಯುವ ರೆಡ್‌ಕ್ರಾಸ್ ಘಟಕದ ನಾಯಕ ಷಣ್ಮುಖ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಸದಸ್ಯರಾದ ಸುಶ್ಮಿತಾ, ಸ್ಪಂದನಾ, ದೀಪಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಘಟಕ ನಾಯಕಿ ದೀಕ್ಷಾ ಎನ್ ಆರ್ ಸ್ವಾಗತಿಸಿ, ಸದಸ್ಯರಾದ ಪವನ್ ವಂದಿಸಿ, ರಿಷಿತಾ ಎ. ಕಾರ್ಯಕ್ರಮ ನಿರೂಪಿಸಿದರು.

Related posts

ಸುಳ್ಯ: ಗಣರಾಜ್ಯೋತ್ಸವ ದಿನದಂದು ‘ಗಣರಾಜೋತ್ಸವ ಕವಿಗೋಷ್ಠಿ’; ಚಂದನ ಸಾಹಿತ್ಯ ವೇದಿಕೆಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ

ಸುಳ್ಯ: ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ, ಕಳೆದ ಕೆಲವು ದಿನಗಳಿಂದ ನಿಲ್ಲಿಸಿದ್ದ ಓಮ್ನಿ ಕಾರಿನ ರಹಸ್ಯವೇನು..?

ಸುಳ್ಯ: ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ಹತ್ತಿದ ವಾಹನ, ಗಂಭೀರ ಗಾಯ, ಆಸ್ಪತ್ರೆಗೆ ದಾಖಲು