ಶಿಕ್ಷಣಸುಳ್ಯ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕೌಶಲ್ಯ ತರಬೇತಿ ಸರಣಿ ಕಾರ್ಯಕ್ರಮ, ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಉದ್ಘಾಟನೆ

ನ್ಯೂಸ್ ನಾಟೌಟ್: ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ, ಆಲೆಟ್ಟಿ ಗ್ರಾಮ ಪಂಚಾಯತ್ ಹಾಗೂ ಲಕ್ಷ್ಮೀ ಸಂಜೀವಿನಿ ಒಕ್ಕೂಟ,ಆಲೆಟ್ಟಿ ಜಂಟಿ ಆಶ್ರಯದಲ್ಲಿ ಕೌಶಲ್ಯ ತರಬೇತಿ ಸರಣಿ ಕಾರ್ಯಕ್ರಮ ನ.07ರಂದು ಆಲೆಟ್ಟಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀಣಾ ಕುಮಾರಿ ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಲರ್ಸ್ ಗಾರ್ಮೆಂಟ್ಸ್ ಲೇಡೀಸ್ ಟೈಲರಿಂಗ್ ಮತ್ತು ಹೊಲಿಗೆ ತರಬೇತಿ ಕೇಂದ್ರದ ಮಾಲಕರಾದ ರಾಜೇಶ್ವರಿ ಶುಭಕರ ಭಾಗವಹಿಸಿದ್ದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೌಶಲ್ಯ ತರಬೇತಿಯ ಸದುಪಯೋಗವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಲೆಟ್ಟಿಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೃಜನ್ ವಿ ಜೆ, ಆಲೆಟ್ಟಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕೆ ಕಮಲ, ಆಲೆಟ್ಟಿ ಲಕ್ಷ್ಮೀ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಅರುಣ ಕುಮಾರಿ ಹಾಗೂ ಎನ್,ಎಮ್.ಸಿ ಸುಳ್ಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶೋಭಾ ಎ ಉಪಸ್ಥಿತರಿದ್ದರು.

Related posts

ಸುಳ್ಯ:ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕ್ಷಯ ರೋಗದ ಕುರಿತ ಕಾರ್ಯಾಗಾರ;ರೋಗ ಹರಡುವ ವಿಧಾನ,ಲಕ್ಷಣ, ಚಿಕಿತ್ಸೆ,ನಿರ್ಮೂಲನೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ

ಸುಳ್ಯ: ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ಆಚರಣೆ

ಸಂಪಾಜೆ: ಪಿಕಪ್ – ಬೈಕ್ ನಡುವೆ ಅಪಘಾತ, ಬೈಕ್ ಸವಾರ ಕಾಲಿಗೆ ಗಂಭೀರ ಗಾಯ