ನ್ಯೂಸ್ ನಾಟೌಟ್: ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕಾಗಿ ಉತ್ತಮ ಕಾಲೇಜಿನ ಆಯ್ಕೆಗಾಗಿ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಸುಳ್ಯದ ಪ್ರತಿಷ್ಠಿತ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 2025-26ನೇ ಸಾಲಿನ ಪ್ರವೇಶಾತಿ ಪ್ರಾರಂಭಗೊಂಡಿದೆ. ವಿಶೇಷವೆಂದರೆ ಇಲ್ಲಿ ಕನಿಷ್ಠ ಬೋಧನಾ ಶುಲ್ಕ ಜೊತೆಗೆ ಪ್ರತಿಭಾವಂತರಿಗೆ, ಬಡ ಮಧ್ಯಮ ವರ್ಗ, ಹಿಂದುಳಿದ ಜಾತಿ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ವಿವಿಧ ವಿದ್ಯಾರ್ಥಿವೇತನಗಳು, ದತ್ತಿನಿಧಿ ಸೌಲಭ್ಯಗಳು ಲಭ್ಯವಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಕ್ರೀಡಾ ಶಿಬಿರದಲ್ಲಿ ಆಯ್ಕೆಯಾದವರಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ಆದ್ಯತೆಯಾಗಿದೆ.
ಯಾವೆಲ್ಲ ಕೋರ್ಸ್ ಲಭ್ಯವಿದೆ..?
ನೆಹರೂ ಮೆಮೋರಿಯಲ್ ಕಾಲೇಜಿನ ಪದವಿ ವಿಭಾಗದಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಎಸ್ ಡಬ್ಲ್ಯು ಹಾಗೂ ಬಿಸಿಎ ಸೇರಿದಂತೆ ಒಟ್ಟು ಆರು ಕೋರ್ಸ್ಗಳು ಲಭ್ಯವಿದೆ. ಈ ಶೈಕ್ಷಣಿಕ ವರ್ಷದಿಂದ ಬಿಕಾಂನಲ್ಲಿ ಬ್ಯುಸಿನೆಸ್ ಡಾಟ ಎನಾಲಿಟಿಕ್ಸ್ ಮತ್ತು ಬಿಸಿಎಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಎಂಬ ನೂತನ ಕೋರ್ಸ್ ಗಳು ಪ್ರಾರಂಭಗೊಂಡಿರುತ್ತದೆ. ಪದವಿ ಅಧ್ಯಯನ ಜೊತೆಗೆ ವಿದ್ಯಾರ್ಥಿಗಳ ಬದುಕನ್ನು ರೂಪಿಸಬಲ್ಲ ಕೌಶಲ್ಯಯುತ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಮಾತ್ರವಲ್ಲ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರುವವರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮಾತ್ರವಲ್ಲ ಸಾಂಸ್ಕೃತಿಕ ಸಂಘದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎನ್.ಸಿ.ಸಿ, ಎನ್.ಎಸ್.ಎಸ್, ರೇಂಜರ್ ಅಂಡ್ ರೋವರ್ಸ್, ನೇಚರ್ ಕ್ಲಬ್, ಸೋಷಿಯಲ್ ವರ್ಕ್ ಫೋರಂ, ವಿಜ್ಞಾನ ಸಂಘ, ಕನ್ನಡ ಸಂಘ, ವಾಣಿಜ್ಯ ಸಂಘ, ರೆಡ್‌ಕ್ರಾಸ್, ವ್ಯವಹಾರ ನಿರ್ವಹಣಾ ಸಂಘ ಸೇರಿದಂತೆ ಇನ್ನಿತರ ಸಂಘಗಳ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 08257 230331 ಸಂಪರ್ಕಿಸಬಹುದು.