ಸುಳ್ಯ

ಸುಳ್ಯ: ‘ನ್ಯೂಸ್ ನಾಟೌಟ್’ ನಲ್ಲಿ ವರದಿ ಪ್ರಕಟಗೊಂಡ ಮೂರೇ ನಿಮಿಷಕ್ಕೆ ವಾರಿಸುದಾರರ ಕೈ ಸೇರಿದ ಬೆಲೆ ಬಾಳುವ ಪರ್ಸ್ , ಪ್ರಾಮಾಣಿಕವಾಗಿ ಪರ್ಸ್ ಹಿಂತಿರುಗಿಸಿದ ಕೆವಿಜಿ ಇಲೆಕ್ಟ್ರಿಷಿಯನ್ ಕಾರ್ಯಕ್ಕೆ ಮೆಚ್ಚುಗೆ

ನ್ಯೂಸ್ ನಾಟೌಟ್: ಸುಳ್ಯದ ಹಳೇಗೇಟು ಪೆಟ್ರೋಲ್‌ ಪಂಪ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ವಾರಿಸುದಾರರಿಗೆ ನ್ಯೂಸ್ ನಾಟೌಟ್ ಕಚೇರಿಯಲ್ಲಿ ಶನಿವಾರ (ಅ.19) ಹಿಂತಿರುಗಿಸಲಾಗಿದೆ.

ಕೆವಿಜಿ ಸಂಸ್ಥೆಯ ಎಚ್ ಟಿ ವಿಭಾಗದ ಇಲೆಕ್ಟ್ರಿಷಿಯನ್ ನವೀನ್‌ ಕುಮಾರ್‌ ಕೆ.ವಿ. ಎಂಬವರಿಗೆ 2 ಸಾವಿರಕ್ಕೂ ಹೆಚ್ಚು ಹಣವಿದ್ದ ಪರ್ಸ್ ಬಿದ್ದು ಸಿಕ್ಕಿತ್ತು. ಅದರಲ್ಲಿ ಮಹತ್ವದ ದಾಖಲಾತಿ ಪ್ರತಿಗಳು, ನಾಲ್ಕು ಎಟಿಎಂ ಕಾರ್ಡ್ ಇತ್ತು. ಇದನ್ನು ಅವರು ನ್ಯೂಸ್ ನಾಟೌಟ್ ಕಚೇರಿಗೆ ತಂದು ವಾರಿಸುದಾರರಿಗೆ ಕೊಡುವಂತೆ ತಿಳಿಸಿದ್ದರು. ಅಂತೆಯೇ ನಮ್ಮಲ್ಲಿ ನ್ಯೂಸ್ ಪ್ರಕಟಿಸಲಾಗಿತ್ತು. ಇದಾಗಿ ಮೂರೇ ನಿಮಿಷಕ್ಕೆ ವಾರಿಸುದಾರರಾದ ಸುಳ್ಯದ ಹಳೆಗೇಟಿನ ಭಾರತ್ ಅಲ್ಯುಮೀನಿಯಂ ವರ್ಕ್ಸ್ ಇದರ ಮಾಲೀಕ ಅಬೂಬಕ್ಕರ್ ಅವರು ಕಚೇರಿಗೆ ಬಂದು ನವೀನ್‌ ಕುಮಾರ್‌ ಕೆ.ವಿ ಮೂಲಕ ಕಳೆದುಕೊಂಡಿದ್ದ ಪರ್ಸ್ ಅನ್ನು ಪಡೆದುಕೊಂಡಿದ್ದಾರೆ. ಇದೀಗ ನವೀನ್ ಅವರ ಪ್ರಮಾಣಿಕ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್ ನಲ್ಲಿ ಗಣರಾಜ್ಯೋತ್ಸವ

ಸುಳ್ಯದಲ್ಲಿ ನಡೆದ ಬೃಹತ್ ತಾಳೆ ಬೆಳೆ ನಾಟಿ ಆಂದೋಲನ, ಅಗತ್ಯ ಅನುದಾನದ ಭರವಸೆ ನೀಡಿದ ಶಾಸಕಿ ಕುಮಾರಿ ಭಾಗಿರಥಿ ಮುರುಳ್ಯ

ಸುಳ್ಯ:ಅಂದು ಕಸ ತುಂಬಿದ್ದ ಶೆಡ್‌ನಲ್ಲಿ ಇಂದು ಕಳೆಗಟ್ಟಿದ ಸಂಭ್ರಮ..!,ಕಲರ್ ಕಲರ್ ವಸ್ತ್ರಗಳಲ್ಲಿ ಮಿಂಚಿದ ಪೌರಕಾರ್ಮಿಕರು..!ಕಾರ್ಯಕ್ರಮ ಹೇಗಿತ್ತು?ವಿಶೇಷತೆಗಳೇನು?