ಕರಾವಳಿಸುಳ್ಯ

ಸುಳ್ಯ: ಆಯೋಧ್ಯೆ ರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ಅಳವಡಿಸಲಾಗಿದ್ದ ಬ್ಯಾನರ್‌ಗೆ ಹಾನಿ;ರಿಕ್ಷಾ ಚಾಲಕರು, ಹಿಂದೂ ಸಂಘಟನೆಗಳ ಆಕ್ರೋಶ;ಆರೋಪಿಗಳನ್ನು ಕೂಡಲೇ ಬಂಧಿಸಿ ಎಂದು ಒತ್ತಾಯ

ನ್ಯೂಸ್ ನಾಟೌಟ್ : ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ.ಹೀಗಾಗಿ ಇಡೀ ದೇಶದಾದ್ಯಂತ ಕೋಟ್ಯಂತರ ಜನ ಈ ಒಂದು ಸಂಭ್ರಮದ ಕ್ಷಣಕ್ಕೆ ಕಾಯುತ್ತಿದ್ದಾರೆ.ಇದಕ್ಕಾಗಿ ಸಕಲ ಸಿದ್ಧತೆಗಳು ನಡಿತಿದ್ದು,ಆಮಂತ್ರಣ ಪತ್ರಿಕೆಯನ್ನೂ ಕೂಡ ಹಂಚಲಾಗುತ್ತಿದೆ.ಅಲ್ಲಲ್ಲಿ ಶ್ರೀ ರಾಮನ ಭಕ್ತರು ಕಟೌಟ್ , ಬ್ಯಾನರ್ ಅಳವಡಿಸಿ ಈ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದಾರೆ.ಇದೀಗ ಸುಳ್ಯದಲ್ಲಿ ಅಳವಡಿಸಲಾದ ಬ್ಯಾನರನ್ನು ಯಾರೋ ಕಿಡಿಕೇಡಿಗಳು ಹರಿದು ಹಾಕಿರುವ ಘಟನೆ ಕುರಿತು ವರದಿಯಾಗಿದೆ.

ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ ಹಾಗೂ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಯುಕ್ತ ಬ್ಯಾನರ್‌ ಅಳವಡಿಸಲಾಗಿತ್ತು.ಆದರೆ ಶ್ರೀರಾಮ ದೇವರು ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯದ ಬ್ಯಾನರ್‌ ನ್ನು ರಾತ್ರಿ ವೇಳೆ ಯಾರೋ ಹರಿದ ಹಾಕಿರುವ ಕುರಿತು ವರದಿಯಾಗಿದೆ.ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೋಲೀಸರು ಸ್ಥಳಕ್ಕಾಗಮಿಸಿದ್ದಾರೆ.

ಬ್ಯಾನರ್‌ನಲ್ಲಿದ್ದ ಶ್ರೀರಾಮ ದೇವರ ಫೋಟೊ ಹರಿದಿರುವುದಕ್ಕೆ ಬ್ಯಾನರ್ ಅಳವಡಿಸಿದ ಚಾಲಕರು ಹಾಗೂ ಹಿಂದೂ ಸಂಘಟನೆಯವರು ತಮ್ಮ ಆಕ್ರೋಶವನ್ನು ಹೊರಹಾಕಿದ್ರು.ಈ ವೇಳೆ ಸಮಗ್ರ ತನಿಖೆ ನಡೆಸಿ, ನ್ಯಾಯಕೊಡಿಸುವುದಾಗಿ ಎಸ್.ಐ. ಈರಯ್ಯರವರು ರಿಕ್ಷಾ ಚಾಲಕರಿಗೆ ಭರವಸೆ ನೀಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

Related posts

ಸುಳ್ಯ ಬಸ್‌ ಸ್ಟ್ಯಾಂಡ್‌ನಲ್ಲಿ ಕಿರಿಕ್ ಪಾರ್ಟಿ ಕುಡುಕ..! ಮದ್ಯದ ಅಮಲಿನಲ್ಲಿ ಸುಮ್ಮನೆ ಕುಳಿತವರ ಜೊತೆ ಅನುಚಿತ ವರ್ತನೆ, ಚಳಿ ಬಿಡಿಸಿದ ಪೊಲೀಸರು..!

ನೆಲ್ಯಾಡಿ: ಕೃಷಿ ತೋಟಕ್ಕೆ ನುಗ್ಗಿ ಆನೆಗಳ ಉಪಟಳ,ರೈತರಿಗೆ ಅಪಾರ ನಷ್ಟ

‘ದೊಡ್ಡವರೆಲ್ಲ ಜಾಣರಲ್ಲ…ಚಿಕ್ಕವರೆಲ್ಲ ಕೋಣರಲ್ಲ’, ಮಕ್ಕಳಿಂದ ಕಲಿಯಿರಿ