ನ್ಯೂಸ್ ನಾಟೌಟ್: ಸುಳ್ಯದ ಕುರುಂಜಿಭಾಗ್ ನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದ ಸುಸಜ್ಜಿತ ರಿಕ್ಷಾ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮ ಶನಿವಾರ (ಮಾ. 22) ನೆರವೇರಿತು.
ನೂತನ ರಿಕ್ಷಾ ನಿಲ್ದಾಣವನ್ನು ಲಯನ್ಸ್ ಜಿಲ್ಲಾ ಗವರ್ನರ್ ಲ| ಭಾರತಿ ಬಿ.ಎಂ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ನಗರ ಸಭಾ ಸದಸ್ಯ ವಿನಯ ಕುಮಾರ್ ಕಂದಡ್ಕ, ಬಿ.ಎಂ.ಎಸ್. ಸುಳ್ಯ ನಿರ್ದೇಶಕ ವೇಣುಗೋಪಾಲ್ ನಾಯರ್ ಮತ್ತಿತರರು ಉಪಸ್ಥಿತರಿದ್ದರು.
ಕುರುಂಜಿಭಾಗ್ ನಲ್ಲಿ ರಿಕ್ಷಾ ಚಾಲಕರಿಗೆ ರಿಕ್ಷಾ ಪಾರ್ಕ್ ಮಾಡುವಾಗ ಸಮರ್ಪಕವಾದ ವ್ಯವಸ್ಥೆಯಿರಲಿಲ್ಲ. ಹಲವಾರು ವರ್ಷಗಳಿಂದ ಚಾಲಕರು ಮಳೆಗಾಲದಲ್ಲಿ ಮಳೆ ಮತ್ತು ಬೇಸಿಗೆಯಲ್ಲಿ ಬಿಸಿಲಿನಿಂದಾಗಿ ತೊಂದರೆಯನುಭವಿಸುತ್ತಿದ್ದರು. ಇದೀಗ ಸುಳ್ಯದ ಲಯನ್ಸ್ ಕ್ಲಬ್ ಸುಸಜ್ಜಿತವಾದ ರಿಕ್ಷಾ ಸ್ಟ್ಯಾಂಡ್ ನಿರ್ಮಿಸಿ ಆಟೋ ಚಾಲಕರಿಗೆ ನೆರವಾಗಿದೆ. ಲಯನ್ಸ್ ಕ್ಲಬ್ 2024-25ನೇ ಸಾಲಿನ ಶಾಶ್ವತ ಯೋಜನೆಯಡಿ ಈ
ಸುಸಜ್ಜಿತವಾದ ಮೇಲ್ಚಾವಣಿ ನಿರ್ಮಿಸಿದೆ. ಲಯನ್ಸ್ ಕ್ಲಬ್‌ನ ಈ ಸೇವಾ ಕಾರ್ಯಕ್ಕೆ ಸುಳ್ಯ-ಕುರುಂಜಿಭಾಗ್ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಕೃತಜ್ಞತೆ ಸಲ್ಲಿಸಿದ್ದಾರೆ.