ನ್ಯೂಸ್ ನಾಟೌಟ್: ಸುಳ್ಯದಲ್ಲಿ ಭಾರಿ ತಲೆನೋವಾಗಿದ್ದ ಕಸದ ವಿಲೇವಾರಿ ಸಮಸ್ಯೆಗೆ ಮೂರು ವರ್ಷದ ಬಳಿಕ ಮುಕ್ತಿ ಸಿಕ್ಕಿದೆ.
ಹಾಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಇವರ ಕಾರ್ಯವೈಖರಿಯಿಂದ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಇದೀಗ ಲಾರಿಗಳ ಮೂಲಕ ನಗರ ಪಂಚಾಯತ್ ಗೋಡಾನ್ ನಲ್ಲಿ ತುಂಬಿದ ಕಸವನ್ನು ಮೈಸೂರಿಗೆ ಕಳುಹಿಸಿಕೊಡಲಾಗಿದೆ. ಹಲವಾರು ವರ್ಷಗಳಿಂದ ನಗರ ಪಂಚಾಯತ್ ನಲ್ಲಿ ಬಾಕಿಯಾಗಿದ್ದ ಕಸದ ಬಗ್ಗೆ ವಿಡಿಯೋವೊಂದು 2022ರಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ವಿಡಿಯೋ ಹರಿದಾಡಿದ ಬಳಿಕ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದನ್ನು ಸ್ಮರಿಸಬಹುದು.