ಕರಾವಳಿಸುಳ್ಯ

‘ಸುಳ್ಯ ನಾಡ ಹಿರಿಮೆ’ ಎಂಬ ಆಲ್ಬಾಮ್ ಸಾಂಗ್ ಗೆ ಭರ್ಜರಿ ಪ್ರತಿಕ್ರಿಯೆ, ವೈರಲ್ ಆದ ತೇಜಸ್ ಚೆಮ್ನೂರ್ ನಿರ್ದೇಶನದ ಶಾರ್ಟ್ ವಿಡಿಯೋ

ನ್ಯೂಸ್ ನಾಟೌಟ್: ಇತ್ತೀಚೆಗೆ ಅದ್ದೂರಿಯಾಗಿ ಸುಳ್ಯದಲ್ಲಿ ನಡೆದ ‘ಸುಳ್ಯೋತ್ಸವ’ ಕಾರ್ಯಕ್ರಮದಲ್ಲಿ ‘ಸುಳ್ಯ ನಾಡ ಹಿರಿಮೆ’ ಎಂಬ ಆಲ್ಬಾಮ್ ಸಾಂಗ್ ಬಿಡುಗಡೆಯಾಗಿತ್ತು. ಈ ಹಾಡಿಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ತೇಜಸ್ ಚೆಮ್ನೂರ್ ನಿರ್ದೇಶನ, ಪರಿಕಲ್ಪನೆಯ ಈ ಸಾಂಗ್ ಗೆ ಸಾರ್ವಜನಿಕ ವಲಯದಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇಡೀ ಸುಳ್ಯವನ್ನು ವರ್ಣಿಸಿದ ಮೊದಲ ಆಲ್ಬಾಮ್ ಸಾಂಗ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಯುವ ನಿರ್ದೇಶಕ ತೇಜಸ್ ಚೆಮ್ನೂರ್ ಭರವಸೆಯ ನಿರ್ದೇಶಕನಾಗಿ ಈ ಆಲ್ಬಾಮ್ ಸಾಂಗ್ ಮೂಲಕ ಹೊರಹೊಮ್ಮಿದ್ದಾರೆ. ಸದ್ಯ 10,000 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದು ಮುನ್ನುಗ್ಗುತ್ತಿದೆ. ಈ ಬಗ್ಗೆ ತೇಜಸ್ ಚೆಮ್ನೂರ್ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿ, ‘ ಸುಳ್ಯೋತ್ಸವದಂತಹ ದೊಡ್ಡ ವೇದಿಕೆಯಲ್ಲಿ ನಮಗೆ ನಮ್ಮ ‘ಸುಳ್ಯ ನಾಡ ಹಿರಿಮೆ’ ಎಂಬ ಆಲ್ಬಾಮ್ ಸಾಂಗ್ ಪ್ರದರ್ಶನಗೊಂಡಿದ್ದು ಬಹಳ ಖುಷಿಯನ್ನು ಕೊಟ್ಟಿತು. ನಮಗೆ ಅವಕಾಶ ನೀಡಿ ಪ್ರೋತ್ಸಾಹಿಸಿ ಬೆಂಬಲಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ್ ಕೆ.ಸಿ ಅವರಿಗೆ ಹೃದಯ ತುಂಬಿದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಜೊತೆಗೆ ನನ್ನೊಂದಿಗಿದ್ದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಮತ್ತು ನಮ್ಮ ತಂಡದ ಕಲಾವಿದರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ನಮ್ಮನ್ನು ಪ್ರೋತ್ಸಾಹಿಸಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ, ಈ ಸಾಂಗ್ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ’ ಎಂದು ತಿಳಿಸಿದರು.

ಈ ಆಲ್ಬಾಮ್ ಸಾಂಗ್ ಗೀತ ರಚನೆಯನ್ನು ಭುವನ ಗೌಡ, ಸಂಗೀತ ನಿಶ್ಚಿತ್ ರಾಜ್, ನಿರ್ಮಾಣ ಹಾಗೂ ಸಹಕಾರ ಚೆಮ್ನೂರು ಕುಟುಂಬ ಮಾಡಿದ್ದಾರೆ. ಆಲ್ಬಾಮ್ ಸಾಂಗ್ ಶೂಟಿಂಗ್ ಬರೆಮೇಲು, ತೊಡಿಕಾನ, ದೇರಾಜೆ ಐನ್ ಮನೆ, ಬೆಳ್ಳಾರೆ ಬೂಡು ಮತ್ತಿತರ ಸ್ಥಳದಲ್ಲಿ ಚಿತ್ರಿಸಲಾಗಿದೆ. ಚೆಂಡೆ, ಯಕ್ಷಗಾನ , ಶಾಸ್ತ್ರೀಯ ಸಂಗೀತ ಮೂಲಕ ನಮ್ಮ ಸಂಸ್ಕೃತಿ ಬಿಂಬಿಸುವ ಕೆಲಸವನ್ನು ಯುವಕ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ‘ಈಗಲ್ ಐ ಫಿಲ್ಮ್ಸ್ ‘ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋವನ್ನು ವೀಕ್ಷಿಸಬಹುದು.

Related posts

ಪುತ್ತೂರು: ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಪೊಲೀಸರನ್ನು ಸಂಜೆಯೊಳಗೆ ಅಮಾನತುಗೊಳಿಸುವಂತೆ ಹಿಂದೂ ಮುಖಂಡ ಅರುಣ್‌ ಪುತ್ತಿಲ ಆಗ್ರಹ

ಅಜ್ಜಾವರ : ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪಾರಾಧನೆ, ಭಕ್ತಾಭಿಮಾನಿಗಳಿಂದ ಸಂಪ್ರದಾಯಬದ್ಧ ಆಚರಣೆ

ಗ್ಯಾಸ್ ಟ್ಯಾಂಕರ್ ಪಲ್ಟಿ,ವಾಹನ ಸಂಚಾರ ಸ್ಥಗಿತ:ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಮೃತಪಟ್ಟ ಯುವತಿ