ಕ್ರೈಂ

ಸುಳ್ಯ: ಕೈಯಲ್ಲಿ ಕತ್ತಿ ಹಿಡಿದು ಹೋಟೆಲ್ ವ್ಯಾಪಾರಿಗೆ ಜಾತಿ ನಿಂದನೆ ಜೀವ ಬೆದರಿಕೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ಹೋಟೆಲ್ ವ್ಯಾಪಾರಿಗೆ ಜಾತಿ ನಿಂದನೆ ಮಾಡಿ ಕೈಯಲ್ಲಿ ಕತ್ತಿ ಹಿಡಿದು ಜೀವ ಬೆದರಿಕೆಯೊಡ್ಡಿದ್ದಾರೆ ಅನ್ನುವ ದೂರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮುರುಳ್ಯ ಗ್ರಾಮ ಸುಳ್ಯ ನಿವಾಸಿ ಚೋಮಣ್ಣ ನಾಯ್ಕ (60 ವರ್ಷ) ಎಂಬವರು ನೀಡಿದ ದೂರಿನಂತೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ದೂರುದಾರರು ಸುಳ್ಯದ ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಜಮೀನು ಹೊಂದಿದ್ದು ಅಲ್ಲಿ ಣ್ಣ ಹೊಟೇಲು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈ ಜಮೀನಿನ ಪಕ್ಕದಲ್ಲಿ ಕಟ್ಟಡವನ್ನು ಹೊಂದಿರುವ ತಿಮ್ಮಪ್ಪ ಗೌಡ ಎಂಬವರು ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದಿನಾಂಕ 15-12-2023 ರಂದು ಬೆಳಗ್ಗೆ ಆರೋಪಿ ತಿಮಪ್ಪ ಗೌಡರು ಹೋಟೇಲ್ ಬಳಿ ಬಂದು ದೂರುದಾರ ಚೋಮಣ್ಣ ಅವರ ಪತ್ನಿ ಬೇಬಿ ಎಂಬವರನ್ನು ಉದ್ದೇಶಿಸಿ ಜಾತಿನಿಂದನೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿ ಕತ್ತಿ ಹಿಡಿದು ಕಡಿದು ಕೊಲ್ಲುವುದಾಗಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ತಿಳಿಸಲಾಗಿದೆ. ಈ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ : 87/2023 ಕಲಂ 504, 506 ಐಪಿಸಿ ಮತ್ತು ಕಲಂ 3(1)(r)(s),3(2)va SC/ST PA Amendment Act 2015 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಮಹಿಳೆ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್..!, 15 ಲಕ್ಷ ರೂ. ದೋಚಿದ ಸಿನಿಮಾ ನಟನ ಬಂಧನ, ಯಾರೀತ ನಟ..?

ಟಿಕ್ ಟಾಕ್ ಚಾಲೆಂಜ್ ಗೆ 13ರ ಬಾಲಕ ಬಲಿ..! ಸ್ನೇಹಿತರ ಸವಾಲು ಸ್ವೀಕರಿಸಿ ನಿದ್ರೆ ಮಾತ್ರೆ ಸೇವನೆ!

ಎಟಿಎಂ ದರೋಡೆ ಮಾಡಲು 15 ನಿಮಿಷದಲ್ಲಿ ಕಳ್ಳತನ ತರಬೇತಿ! ಆತನ ಖತರ್ನಾಕ್ ಪ್ಲಾನ್ ಗೆ ಪೊಲೀಸರೆ ಸುಸ್ತು!