ಸುಳ್ಯ

ಸುಳ್ಯ: ಮೊಸರುಕುಡಿಕೆ ಉತ್ಸವ, ಧಾರ್ಮಿಕ ಕಾರ್ಯಕ್ರಮ, ಮಾಜಿ ಸಂಸದ ಪ್ರತಾಪ್‌ ಸಿಂಹಗೆ ಉತ್ಸವದ ಆಮಂತ್ರಣ ನೀಡಿ ಆಹ್ವಾನ

31
Spread the love

ನ್ಯೂಸ್‌ ನಾಟೌಟ್‌: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪಿಸಲ್ಪಟ್ಟ ವಿಶ್ವ ಹಿಂದೂ ಪರಿ‍ಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ಮೊಸರುಕುಡಿಕೆ ಉತ್ಸವ ಸೆ.4 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಎದುರು, ಗೋಪುರ ಮೊಸರು ಕುಡಿಕೆ ಮತ್ತು ಧಾರ್ಮಿಕ ಸಭೆ, ಶೋಭಾಯಾತ್ರೆಯೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.

ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರನ್ನು ಸಂಘಟಕರು ಭೇಟಿಯಾಗಿ ಉತ್ಸವದ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿದರು. ಈ ಸಂದರ್ಭ ಮೊಸರು ಕುಡಿಕೆ ಉತ್ಸವದ ಕಾರ್ಯದರ್ಶಿ ಪ್ರಕಾಶ್ ಯಾದವ್, VHP ಕಾರ್ಯದರ್ಶಿ ನವೀನ್ ಎಲಿಮಲೆ, ಬಜರಂಗದಳ ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ, ಬಜರಂಗದಳ ಜಿಲ್ಲಾ ಸಾಪ್ತಾಹಿಕ್ ಮಿಲನ್ ರೂಪೇಶ್ ಪೂಜಾರಿಮನೆ, ಬಜರಂಗದಳ ಸಹ ಸಂಯೋಜಕ ಸನತ್ ಚೊಕ್ಕಾಡಿ ಉಪಸ್ಥಿತರಿದ್ದರು.

See also  ಸುಳ್ಯ:ಅಧಿಕೃತವಾಗಿ ಮರಳುಗಾರಿಕೆ ಮಾಡೋಕೆ ಅವಕಾಶ ಕೊಡಿ,ಮರಳು ಸಾಗಾಟದಾರರಿಂದ ಒತ್ತಾಯ
  Ad Widget   Ad Widget   Ad Widget