Latestಕರಾವಳಿಸುಳ್ಯ

ಬೆಳ್ಳಾರೆ:ಬೆಳ್ಳಂಬೆಳಗ್ಗೆ ಧಗ ಧಗ ಹೊತ್ತಿ ಉರಿದ ಪಿಕಪ್!ವಾಹನದ ಮುಂಭಾಗ ಸುಟ್ಟು ಕರಕಲು!

737

ನ್ಯೂಸ್ ನಾಟೌಟ್: ಪಿಕಪ್ ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ವಾಹನವೊಂದು ಉರಿದು ಸುಟ್ಟು ಹೋದ ಘಟನೆ ಮೇ 11ರಂದು ಬೆಳಗ್ಗೆ ಸಂಭವಿಸಿದೆ. ಸುಳ್ಯದ ಬೆಳ್ಳಾರೆ ಸಮೀಪದ ನೆಟ್ಟಾರು ಎಂಬಲ್ಲಿ ಈ ದುರ್ಘಟನೆ ನಡೆದಿದೆ.

ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ನೆಟ್ಟಾರು ತಿರುವಿನಲ್ಲಿ ಆಕಸ್ಮಿಕವಾಗಿ ಎದುರು ಭಾಗದಲ್ಲಿ ಬೆಂಕಿ ಹತ್ತಿಕೊಂಡು ಉರಿಯಿತು. ಚಾಲಕ ಕೂಡಲೇ ವಾಹನ ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಆದರೂ ಬೆಂಕಿಯ ತೀವ್ರತೆಗೆ ವಾಹನ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಹಾಗೂ ಸ್ಥಳೀಯರು ಆಗಮಿಸಿ ಕಾರ್ಯಾಚರಣೆ ನಡೆಸಿದರು.

See also  ಆಸ್ತಿ ಮಾರಿದ ಹಣಕ್ಕಾಗಿ ಪುತ್ರನ ಕಣ್ಣು:ಮಧ್ಯವರ್ತಿ ಸೇರಿದಂತೆ ತಂದೆಯನ್ನೂ ಮಚ್ಚಿನಿಂದ ಕೊಂದ ಪಾಪಿ ಪುತ್ರ,ತಾಯಿ ಸ್ಥಿತಿ ಗಂಭೀರ..
  Ad Widget   Ad Widget     Ad Widget   Ad Widget   Ad Widget   Ad Widget