ಕ್ರೈಂ

ಸುಳ್ಯ: ಪತಿ, ಮಕ್ಕಳನ್ನು ಬಿಟ್ಟು ಪ್ರೇಮಿಯೊಂದಿಗೆ ಪರಾರಿಯಾಗಿದ್ದ ಮಹಿಳೆ ಕುಂದಾಪುರದಲ್ಲಿ ಪತ್ತೆ..!

ಸುಳ್ಯ: ಪತಿ ಹಾಗೂ ಮಕ್ಕಳನ್ನು ಬಿಟ್ಟು ಪ್ರೇಮಿಯ ಜತೆ ಪರಾರಿಯಾಗಿದ್ದ ಮಹಿಳೆ ಕುಂದಾಪುರದಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಅಸ್ಸಾಂ ಮೂಲದ ಮಹಿಳೆ ಜನವರಿ 25 ರಂದು 11 ಗಂಟೆಗೆ ಸುಳ್ಯದ ಪೈಚಾರಿನಿಂದ ಕಾಣೆಯಾಗಿದ್ದಳು. ಕೂಲಿ ಕೆಲಸ ಮಾಡುತ್ತಿದ್ದ ದಂಪತಿಗೆ ದೂರದ ಊರಿನಿಂದ ಬಂದು ಸುಳ್ಯದಲ್ಲಿ ಜೀವನ ಕಟ್ಟಿಕೊಂಡಿದ್ದರು. ಇಬ್ಬರು ಮಕ್ಕಳ ಜತೆಗಿನ ಸುಖ ಸಂಸಾರವಿತ್ತು. ಆದರೆ ಪತ್ನಿ ಇದ್ದಕ್ಕಿದ್ದಂತೆ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಪತಿ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ಪೊಲೀಸರು ಆಕೆಯನ್ನು ಹುಡುಕುವಲ್ಲಿ ತೊಡಗಿದಾಗ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ರವರಿಗೆ ಮಹಿಳೆಯ ಬಳಿ ಇದ್ದ ಮೊಬೈಲ್ ಫೋನ್ ಲೊಕೇಶನ್ ಕುಂದಾಪುರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅದಾಗಲೇ ವಿಷಯ ಬೆಳಕಿಗೆ ಬಂದಿದ್ದು ಮಹಿಳೆ ತನ್ನ ಪ್ರಿಯಕರ ಚಂದನ್ ಎಂಬ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಬಂದಿದ್ದು ಆತನೊಂದಿಗೆ ಇರುವುದಾಗಿ ತೀರ್ಮಾನ ಕೈಗೊಂಡಿದ್ದರು ಎನ್ನಲಾಗಿದೆ. ವಿಷಯ ತಿಳಿದ ಆಕೆಯ ಪತಿ ತನ್ನ ಒಬ್ಬ ಪರಿಚಯಸ್ಥರನ್ನು ಕರೆದುಕೊಂಡು ಕುಂದಾಪುರಕ್ಕೆ ಹೋಗಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಇದ್ದ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕಂಡು ಪೊಲೀಸರೊಂದಿಗೆ ನನ್ನ ಪತ್ನಿಯನ್ನು ನನ್ನೊಂದಿಗೆ ಕಳಿಸಿಕೊಡುವಂತೆ ಕೇಳಿಕೊಂಡರು ಎನ್ನಲಾಗಿದೆ. ಆಗ ಆ ಮಹಿಳೆ ತಾನು ಗಂಡನ ಬಳಿ ಹೋಗುವುದಿಲ್ಲ ತನ್ನ ಪ್ರೇಮಿ ಚಂದನ್ ರವರ ಜೊತೆ ಇರುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಆಕೆಗೆ ಬುದ್ಧಿವಾದ ಹೇಳಿದ ಕುಂದಾಪುರ ಪೊಲೀಸರು ಜನವರಿ 26ರಂದು ರಾತ್ರಿ ಆಕೆಯ ಮನವೊಲಿಸಿ ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

Related posts

ದರ್ಶನ್‌ ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ..? ಹೈಕೋರ್ಟ್‌ ಗೆ ವಕೀಲರಿಂದ ವರದಿ ಸಲ್ಲಿಕೆ..!

ವಿದ್ಯಾರ್ಥಿನಿಯನ್ನು ಗಮನಿಸದೆ ಶಾಲಾ ಕೊಠಡಿಗೆ ಬೀಗ ಹಾಕಿ ಹೋದ ಶಿಕ್ಷಕರು! 1 ನೇ ತರಗತಿ ವಿದ್ಯಾರ್ಥಿನಿ ಗಣೇಶನ ಪವಾಡದಿಂದ ಬದುಕಿದ್ದು ಹೇಗೆ? ಮುಂದೇನಾಯ್ತು?

ಓಲಾ ಸ್ಕೂಟರ್‌ ರಿಪೇರಿಗೆ 90,000 ರೂ. ಬಿಲ್ ನೋಡಿ ಶಾಕ್ ಆದ ಗ್ರಾಹಕ..! ಶೋ ರೂಮ್‌ ಮುಂದೆಯೇ ಓಲಾ ಸ್ಕೂಟರ್‌ ಅನ್ನು ಪುಡಿ ಮಾಡಿದ ವ್ಯಕ್ತಿ..! ಇಲ್ಲಿದೆ ವಿಡಿಯೋ