ನ್ಯೂಸ್ ನಾಟೌಟ್: ಸುಳ್ಯದ ಕುರುಂಜಿಭಾಗ್ ನ ಆಟೋ ಚಾಲಕರೊಬ್ಬರಿಗೆ ಬಿದ್ದು ಸಿಕ್ಕಿದ ಮೊಬೈಲನ್ನು ಅದರ ನಿಜವಾದ ಮಾಲೀಕರನ್ನು ಹುಡುಕಿ ಮೊಬೈಲನ್ನು ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಭಾನುವಾರ (ಮಾ.23) ವರದಿಯಾಗಿದೆ.
ಆಟೋ ಚಾಲಕ ಅನಿತ್ ಕುಮಾರ್ ಅವರಿಗೆ ರಿಕ್ಷಾ ಪಾರ್ಕ್ ಸಮೀಪದ ಮೊಬೈಲ್ ಬಿದ್ದು ಸಿಕ್ಕಿದ್ದು, ಬಳಿಕ ಮೊಬೈಲ್ ಮಾಲೀಕ ವಿನ್ಯಾಸ್ ಎಂಬವರನ್ನು ಗುರುತಿಸಿ ಒಪ್ಪಿಸಿದ್ದಾರೆ. ಮೊಬೈಲ್ ಕಳೆದುಹೋಯಿತು ಎಂಬ ಚಿಂತೆಯಲ್ಲಿದ್ದ ವಿದ್ಯಾರ್ಥಿ ವಿನ್ಯಾಸ್ ಗೆ ಕುರುಂಜಿ ಬಾಗ್ ಆಟೋ ಚಾಲಕ ಅನಿತ್ ಕುಮಾರ್ ನೆರವಾಗಿದ್ದಾರೆ. ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಮತ್ತು ಸಹಕರಿಸಿದ ಸುಳ್ಯ ಕುರುಂಜಿ ಬಾಗ್ ನ ಆಟೋ ಚಾಲಕರಿಗೆ ಅನಿತ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.