ನ್ಯೂಸ್ ನಾಟೌಟ್: ಅಪರಿಚಿತ ವ್ಯಕ್ತಿಯೋರ್ವ ತ್ಯಾಜ್ಯ ಎಸೆದು ಕಿಡಿಗೇಡಿತನ ಕೃತ್ಯ ಎಸಗಿದ ಘಟನೆ ಸುಳ್ಯದಿಂದ ವರದಿಯಾಗಿದೆ. ಈ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು,ಸುಳ್ಯ ಠಾಣೆಗೆ ದೂರು ನೀಡಲಾಗಿದೆ.
ಏನಿದು ಘಟನೆ?
ಸುಳ್ಯ ನಗರದ ಕುರುಂಜಿಭಾಗ್ ಮನೆಯ ಮುಂಭಾಗದ ಕಿಟಕಿಯ ಸನ್‌ಶೇಡ್ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಬಂದು ತ್ಯಾಜ್ಯ ಎಸೆದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಳ್ಯದ ಕುರುಂಜಿಭಾಗ್ ನಲ್ಲಿ ಈ ಘಟನೆ ನಡೆದಿದೆ. ದೃಶ್ಯದಲ್ಲಿ ಓರ್ವ ವ್ಯಕ್ತಿಯು ಕೈಯಲ್ಲಿ ತ್ಯಾಜ್ಯದ ಚೀಲ ಹಿಡಿದು ಕೊಂಡು ಬಂದಿದ್ದು,ಮನೆ ಬಳಿ ತ್ಯಾಜ್ಯ ಎಸೆಯುತ್ತಾನೆ. ತ್ಯಾಜ್ಯ ದುರ್ವಾಸನೆ ಬರಲು ಆರಂಭಿಸಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.ಬಳಿಕ ಸಿಸಿ ಕ್ಯಾಮರಾ ಪರಿಶೀಲಿದಾಗ ತ್ಯಾಜ್ಯ ಎಸೆದವರು ಪತ್ತೆಯಾಗಿದ್ದಾರೆ. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದು,ಘಟನೆ ಬಗ್ಗೆ ಸಿಸಿ ಕೆಮರಾ ದೃಶ್ಯಾವಳಿ ಸಹಿತ ನಗರ ಪಂಚಾಯತ್ ಗೂ ದೂರು ನೀಡಲಾಗಿದೆ.