ಕರಾವಳಿಸುಳ್ಯ

ಸುಳ್ಯ: ಎಂ.ಬಿ. ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನ್ಯೂಸ್ ನಾಟೌಟ್ : ಎಂ.ಬಿ. ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಧ್ವಜಾರೋಹಣ ನೆರವೇರಿಸಿದರು. ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ. ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು “ಸಾಂದೀಪ್ ವಿಶೇಷ ಮಕ್ಕಳ ಶಾಲೆಯನ್ನು ನಿರ್ವಹಿಸುವುದು ಅದರಲ್ಲೂ ವಿಶೇಷ ಮಕ್ಕಳಿಗೆ ವಿದ್ಯೆಯನ್ನು ಕಲಿಸುವುದು ನಿಜಕ್ಕೂ ಪುಣ್ಯದ ಕೆಲಸ. ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ ಮಕ್ಕಳನ್ನು ಸಮಾಜಮುಖಿಯಾಗಿ ತರುವಲ್ಲಿ ಪ್ರಯತ್ನ ಪಡುತ್ತಿರುವ ಎಂ.ಬಿ ಸದಾಶಿವ ದಂಪತಿ ಸೇವೆ ದೇವತಾ ಸೇವೆಯೆಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಡಾ.ವೆಂಕಟಕೃಷ್ಣ “ವಿಶೇಷ ಮಕ್ಕಳಿಗೆ ಶಿಕ್ಷಣ ಕೊಟ್ಟು ಅವರನ್ನು ಸಮಾಜದ ಮುಂದೆ ತಂದು ಅವರ ಬೆಳವಣಿಗೆಯಲ್ಲಿ ಸಹಕಾರಿಯಾಗುವುದೇ ನಿಜವಾದ ಸ್ವಾತಂತ್ರ್ಯ. ವಿಶೇಷ ಮಕ್ಕಳು ಸಮಾಜದ ಮಂದೆ ಅವರವರ ಪ್ರತಿಭೆಗಳನ್ನು ಅನಾವರಣಗೊಳಿಸಿದಾಗ ಸ್ವಾತಂತ್ರ್ಯದ ಕಲ್ಪನೆ ಸಾಕಾರಗೊಳ್ಳುತ್ತದೆ” ಎಂದು ಹೇಳಿದರು.

ಈ ವೇಳೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಡಾ.ಲೀಲಾಧರ್ ರವರ ಷರಾ ಪ್ರಕಾಶನ ಇದರ ವತಿಯಿಂದ ಸಾಂದೀಪ್ ಶಾಲೆಯ ವಿಶೇಷ ಮಕ್ಕಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಜಯಂತ ಹರ್ಲಡ್ಕ, ಪ್ರಧಾನ ಕಾರ್ಯದರ್ಶಿ ಗಣೇಶ್, ಎಂ.ಬಿ. ಫೌಂಡೇಶನ್ ನ ಸಲಹೆಗಾರರಾದ ಲ.ರಂಗನಾಥ್,ನೇತ್ರಾವತಿ ಪಡ್ಡಂಬೈಲು,ಕರ್ನಾಟಕ ರಬ್ಬರ್ ಡೀಲರ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಾರೂಕ್ ಪೈಚಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷ ಎಂ. ಬಿ ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಸಂಚಾಲಕಿ ಹರಿಣಿ ಸದಾಶಿವ ಸ್ವಾಗತಿಸಿದರು.ಶಾಲೆಯ ಸಿಬ್ಬಂದಿ ಪುನೀತ್ ಪ್ರಾರ್ಥಿಸಿದರು.ಟ್ರಸ್ಟಿ ಸೂರಯ್ಯ ಸೂಂತೋಡು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಶರೀಫ್ ಜಟ್ಟಿಪಳ್ಳ ,ಎಂ ಬಿ ಫೌಂಡೇಶನ್ ಕೋಶಾಧಿಕಾರಿ ಪುಷ್ಪಲತಾ ರಾಧಾಕೃಷ್ಣ ಮಾಣಿಬೆಟ್ಟು, ಸಾಂದೀಪ್ ಶಾಲೆಯ ಶಿಕ್ಷಕರು ಸಹಕರಿಸಿದರು.

Related posts

ಶ್ರೀರಾಮನಿಗಾಗಿ ಬರಿಗಾಲಲ್ಲಿ ಅಯೋಧ್ಯೆಗೆ ಹೊರಟ ಮುಸ್ಲಿಂ ಯುವತಿ..!1,500 ಕಿ.ಮೀ ದೂರ ಕ್ರಮಿಸಿ ಅಯೋಧ್ಯೆ ಶ್ರೀ ರಾಮನ ದರ್ಶನ ಪಡೆಯಲು ಕಾರಣವೇನು?

ಪುತ್ತೂರು : ಬಾವಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ, ಅಮ್ಮನನ್ನು ಕಳೆದುಕೊಂಡು ಇಬ್ಬರು ಮಕ್ಕಳು ಅನಾಥ

ಸುಳ್ಯ : ಬಿಳಿಯಾರು 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ,ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರುಷ ವ್ಯಕ್ತಪಡಿಸಿದ ಚಿಣ್ಣರು