ನ್ಯೂಸ್ ನಾಟೌಟ್: ಯುವಕ ಹಾಗೂ ಯುವತಿ ಪ್ರೀತಿಸಿ ಮದುವೆಯಾಗಿರುವ ಘಟನೆ ಬಗ್ಗೆ ಸುಳ್ಯದಿಂದ ವರದಿಯಾಗಿದೆ.ಆದರೆ ಈ ಮದುವೆಗೆ ಯುವತಿ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎಣ್ಮೂರಿನ ಯುವಕ ಹಾಗೂ ಯುವತಿ ಮಂಗಳವಾರ ರಿಜಿಸ್ಟರ್ಡ್ ವಿವಾಹವಾದವರು ಎಂದು ತಿಳಿದು ಬಂದಿದೆ. ಈ ಜೋಡಿ ಮಂಗಳವಾರ ಸುಳ್ಯದ ವಕೀಲರ ಕಚೇರಿಗೆ ಬಂದಾಗ ಯುವತಿಯ ಮನೆಯವರಿಗೆ ವಿಷಯ ತಿಳಿದಿದೆ. ಈ ವೇಳೆ ಅವರು ಸುಳ್ಯಕ್ಕೆ ಬಂದು ಅಲ್ಲಿ ವಿಚಾರಿಸಲು ಮುಂದಾಗಿದ್ದಾರೆ, ಈ ಸಂದರ್ಭ ಭಯಗೊಂಡ ಯುವಕ ಹಾಗೂ ಯುವತಿ ಸುಳ್ಯ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿಗಳು ಅವರನ್ನು ವಿಚಾರಿಸಿ ಪೊಲೀಸ್ ಸಿಬ್ಬಂದಿ ಜತೆಯಲ್ಲಿಯೇ ಬೆಳ್ಳಾರೆ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.