ಕರಾವಳಿ

‘ಅಹಂ’ ಪಕ್ಕಕ್ಕಿಟ್ಟರೆ ಮಾತ್ರ ಜೀವನದಲ್ಲಿ ಸಕ್ಸಸ್ ..! K.V.G. ‘Graduation day’ ಕಾರ್ಯಕ್ರಮದಲ್ಲಿ ಡಾ|ನಾಗಲಕ್ಷ್ಮಿ ಚೌಧರಿ ಮೈನವಿರೇಳಿಸಿದ ಭಾಷಣ

ನ್ಯೂಸ್ ನಾಟೌಟ್: ಜೀವನದಲ್ಲಿ ಮುಂದೆ ಬರಬೇಕಿದ್ದರೆ ನಮ್ಮ ‘ಅಹಂ’ (ಇಗೊ) ಪಕ್ಕಕ್ಕಿಟ್ಟು ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ | ನಾಗಲಕ್ಷ್ಮೀ ಚೌಧರಿ ತಿಳಿಸಿದರು.

ಶನಿವಾರ (ಮೇ 18) ಸುಳ್ಯದ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಎಲೈಡ್ ಹೆಲ್ತ್ ಸೈನ್ಸಸ್ ಮತ್ತು ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ನಾನು ನನ್ನದು ಅನ್ನುವ ಅಹಂಕಾರ ಯಾವುದೇ ವೃತ್ತಿಯಲ್ಲಿ ಇರುವವರಿಗೆ ಒಳ್ಳೆಯದಲ್ಲ. ಮೊದಲು ನಿಮ್ಮ ‘ಅಹಂ’ ಬಿಟ್ಟು ಕೆಲಸ ಮಾಡಿ. ನೀವು ನಿಮ್ಮ ಕೆಲಸದ ವೇಳೆ ನಿಮ್ಮ ಕಚೇರಿಯಲ್ಲಿ ಎಷ್ಟು ಕಾಮ್ ಆಗಿ ಇರ್ತಿರೋ ಅಷ್ಟು ಒಳ್ಳೆಯದು. ಇನ್ನೊಬ್ಬರು ಹೇಳುವುದನ್ನು ಕೇಳುವ ಗುಣ ನಿಮ್ಮಲ್ಲಿರಬೇಕು. ಅದು ದೊಡ್ಡವರಿರಲಿ ಅಥವಾ ಚಿಕ್ಕವರಿರಲಿ, ಒಳ್ಳೆಯದನ್ನು ಸ್ವೀಕರಿಸುವ ಗುಣವನ್ನು ಬೆಳೆಸಿಕೊಂಡಾಗ ಒಂದಲ್ಲ ಒಂದು ದಿನ ಜೀವನದಲ್ಲಿ ನೀವು ಸಕ್ಸಸ್ ಆಗುತ್ತೀರಿ. ಈ ಅಹಂ ಅನ್ನುವುದು ಅತ್ಯಂತ ಕೆಟ್ಟದ್ದು. ಅದು ಜೀವನವನ್ನೇ ನಾಶ ಮಾಡಿ ಬಿಡುತ್ತದೆ. ಅಹಂ ಇರುವ ವ್ಯಕ್ತಿ ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಇಗೊ ಅನ್ನೋದು ಇರುತ್ತೆ. ಆದರೆ ಅದನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ, ನೀವು ವಿದ್ಯಾರ್ಥಿಗಳು ಎಲ್ಲವನ್ನು ಕೂಡ ಪಾಲಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕಿದೆ ಎಂದು ತಿಳಿಸಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಅಧ್ಯಕ್ಷ ಡಾ| ಕೆ.ವಿ ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಎಒಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಎಒಎಲ್ಇ ಕಾರ್ಯದರ್ಶಿ ಡಾ| ಐಶ್ವರ್ಯ ಕೆ.ಸಿ, ಎಒಎಲ್ ಇ ಖಜಾಂಚಿ ಡಾ. ಗೌತಮ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಡೀನ್ ಡಾ | ನಿಲಾಂಬಿಕೈ ನಟರಾಜನ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ| ಸಿ .ಆರ್ ಭಟ್, ಫಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲ ಡಾ | ಸಾಯಿರಾಂ, ಕೆವಿಜಿ ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಕೋಆರ್ಡಿನೇಟರ್ ಡಾ| ನವ್ಯ, ಕೆವಿಜಿ ಮೆಡಿಕಲ್ ಕಾಲೇಜಿನ ರಿಜಿಸ್ಟ್ರಾರ್ ಡಾ | ಸಂದೇಶ್ ಉಪಸ್ಥಿತರಿದ್ದರು.

Related posts

ಮಂಗಳೂರು: ಚಿಕಿತ್ಸೆಗೆ ದಾಖಲಾಗಿದ್ದ ಮಹಿಳಾ ರೋಗಿ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ..! ಬಲವಂತವಾಗಿ ಮಹಿಳೆಯ ಬಟ್ಟೆಗಳನ್ನು ಬಿಚ್ಚಿ ಫೋಟೋ ಕ್ಲಿಕ್ಕಿಸಿದವ ಅರೆಸ್ಟ್

ಇದು ಬರೋಬ್ಬರಿ 20 ಅಡಿಯ ಅತ್ಯಂತ ಉದ್ದವಾದ ಪೆನ್ ..!ಇಂಡಿಯಾ ಬುಕ್ ಆಫ್ ರೆಕಾರ್ಡ್‌ʼನಲ್ಲಿ ಸ್ಥಾನ ಪಡೆದ ಈ ಪೆನ್ನಿನ ವಿಶೇಷತೆಯೇನು ಗೊತ್ತಾ?

ಕೊರೋನಾ ಯಾವಾಗ ನಿಲ್ಲುತ್ತದೆ? ಕೋಡಿಮಠದ ಸ್ವಾಮೀಜಿ ಹೇಳಿದ್ರು ಇಂಟ್ರಸ್ಟಿಂಗ್‌ ಭವಿಷ್ಯ