ಶಿಕ್ಷಣಸುಳ್ಯ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕ, ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗಕ್ಕೆ ಡಾ.ಹಸ್ರಿನ್ ಅಲಿ ನಿಯೋಜನೆ

192

ನ್ಯೂಸ್ ನಾಟೌಟ್: ಮಂಗಳೂರಿನ ಲೇಡಿ ಗೊಷನ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ತಜ್ಞ ವೈದ್ಯೆ ಡಾ. ಹಸ್ರಿನ್ಅಲಿ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ )ನಿಂದ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದು ಆಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ಈಕೆ ಸುಳ್ಯ ನಾವೂರು ನಿವಾಸಿಗಳಾದ ಜನತಾ ಗ್ರೂಪ್ಸ್ ನ ಹಮೀದ್ ಜನತಾ ಮತ್ತು ತಾಹಿರ ದಂಪತಿಗಳ ಪುತ್ರಿ ಎಂದು ವರದಿ ತಿಳಿಸಿದೆ.

ಪೂರ್ವ ಪ್ರಾಥಮಿಕ ಗ್ರೀನ್ ವ್ಯೂ ಶಾಲೆಯಲ್ಲಿ ನಡೆಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರೋಟರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಪಿಯುಸಿ ಮಂಗಳೂರಿನ ಎಕ್ಸ್ಪರ್ಟ್ಸ್ ನಲ್ಲಿ ಮುಗಿಸಿ, ಕೆಎಂಸಿ ಯಲ್ಲಿ ಎಂಬಿಬಿಎಸ್, ಎಂಎಸ್ (ಓಬಿಜಿ & ಗೈನೋ ) ಪದವಿ ಪಡೆದಿದ್ದಾರೆ.

Click

https://newsnotout.com/2024/08/dog-droped-down-from-5-flood-baby-nomore-kannada-news/
See also  ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪದವಿ ಪ್ರಧಾನ ಕಾರ್ಯಕ್ರಮ ಸಂಪನ್ನ, ಯುವ ವೈದ್ಯರಿಗೆ ಸ್ತ್ರಿ ರೋಗ ತಜ್ಞೆ ಖ್ಯಾತ ವೈದ್ಯೆ ಡಾ | ಪದ್ಮಿನಿ ಪ್ರಸಾದ್ ಕಿವಿಮಾತು
  Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget