ಶಿಕ್ಷಣಸುಳ್ಯ

ಸುಳ್ಯ :ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ, ವಿದ್ಯಾರ್ಥಿಗಳಿಗೆ ಸಂವಿಧಾನ ವಿಧಿಗಳ ಚಿತ್ರ ಪ್ರದರ್ಶಿಸುವ ಸ್ಪರ್ಧೆ

ನ್ಯೂಸ್ ನಾಟೌಟ್ :ಕೆವಿಜಿ ಕಾನೂನು ಮಹಾವಿದ್ಯಾಲಯ ಸುಳ್ಯ ಹಾಗೂ ಆಧಿವಕ್ತ ಪರಿಷತ್ ದ.ಕ ಜಿಲ್ಲೆ ಸುಳ್ಯ ಘಟಕ ಇದರ ಸಹಯೋಗದೊಂದಿಗೆ ನವೆಂಬರ್ 26 ರಂದು ಮಂಗಳವಾರ ಕೆವಿಜಿ ಕಾನೂನು ಕಾಲೇಜು ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಪಾಲರಾದ ಡಾ. ಉದಯಕೃಷ್ಣ. ಬಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆವಿಜಿ ಕಾನೂನು ಕಾಲೇಜಿನ ಸಲಹೆಗಾರ ಹೇಮನಾಥ ಕೆ.ವಿ ನೆರವೇರಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿಯ ಹಿರಿಯ ನ್ಯಾಯವಾಧಿಗಳಾದ ಸುಬ್ರಮಣ್ಯ ಅಘರ್ಥ ಮಾತನಾಡಿ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಗಮನಾರ್ಹ ಸಮತೋಲನ ಎಂಬ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆವಿಜಿ ಕಾನೂನು ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ಕೆ.ವಿ ದಾಮೋಧರ ಗೌಡ, ವಕೀಲರ ಸಂಘ ಸುಳ್ಯದ ಅಧ್ಯಕ್ಷರಾದ ಸುಕುಮಾರ ಕೊಡ್ತುಗುಳಿ , ದ.ಕ ಜಿಲ್ಲೆಯ ಅಧಿವಕ್ತ ಪರಿಷತ್ ನ ಉಪಾಧ್ಯಕ್ಷ ಜಗದೀಶ್ ಡಿ.ಪಿ, ಅದಿವಕ್ತ ಪರಿಷತ್ ಸುಳ್ಯ ಘಟಕದ ಅಧ್ಯಕ್ಷರಾದ ದಿಲೀಪ್ ಬಾಬ್ಲು ಬೆಟ್ಟು , ಕೆವಿಜಿ ಕಾನೂನು ಮಹಾವಿದ್ಯಾಲಯ ಸುಳ್ಯದ ಉಪನ್ಯಾಸಕಿ ಟೀನಾ ಹೆಚ್ ಎಸ್ ಉಪಸ್ಥಿತರಿದ್ದರು.

ಸಂವಿಧಾನ ದಿನಾಚರಣೆಯ ಪ್ರಯುಕ್ತ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಸಂವಿಧಾನದ ವಿಧಿಗಳ ಚಿತ್ರಗಳನ್ನು ಪ್ರದರ್ಶಿಸುವ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನ್ಯಾಯವಾದಿ ಸುಮಾ ಕೆ.ಎಸ್ ಪ್ರಾರ್ಥಿಸಿ, ದಿಲೀಪ್ ಬಾಬ್ಲು ಬೆಟ್ಟು ಸ್ವಾಗತಿಸಿದರು. ಕೆವಿಜಿ ಕಾನೂನು ಕಾಲೇಜಿನ ಉಪನ್ಯಾಸಕಿ ಟೀನಾ ಹೆಚ್.ಎಸ್ ವಂದಿಸಿದರು. ಉಪನ್ಯಾಸಕಿ ನಯನ ಪಿ.ಯು ಕಾರ್ಯಕ್ರಮ ನಿರೂಪಿಸಿದರು.

Click

https://newsnotout.com/2024/11/40-crore-budget-business-of-cinema-collects-25-lakh-v/
https://newsnotout.com/2024/11/darshan-kananda-news-bail-viral-news-viral-news-fh/
https://newsnotout.com/2024/11/kannada-news-hasana-alur-2-years-love-jf/
https://newsnotout.com/2024/11/rbi-governer-illness-kannada-news-chennail-apolo/
https://newsnotout.com/2024/11/puri-kannada-news-viral-news-school-jhf/
https://newsnotout.com/2024/11/pan-card-issue-narendra-modi-kananda-news-2-0/

Related posts

ಸುಳ್ಯ: ಮಂಡೆಕೋಲು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ

5 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು 50 ಲಕ್ಷ ರೂ. ಬೇಕಾಗಿದೆ, ತಕ್ಷಣ ನೆರವಾಗುವಿರಾ? ಪುಟ್ಟ ಜೀವ ಉಳಿಸೋಣ ಬನ್ನಿ

ಸುಳ್ಯ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಾಯ