ಕರಾವಳಿಕಾಸರಗೋಡು

ಸುಳ್ಯದ ಕೆವಿಜಿ ಕ್ಯಾಂಪಸ್‌ನಲ್ಲಿ ‘ಕ್ಯಾಂಪಸ್ ಕೆಫೆ’ ಶುಭಾರಂಭ

342

ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಕ್ಯಾಂಪಸ್‌ನಲ್ಲಿ ಹೊಸದಾಗಿ ‘ಕ್ಯಾಂಪಸ್ ಕೆಫೆ’ ಸಂಸ್ಥೆಯನ್ನು ಆರಂಭಿಸಲಾಗಿದೆ. ಕುರುಂಜಿಭಾಗ್‌ನಲ್ಲಿ ಆರಂಭವಾಗಿರುವ ರೂಪೇಶ್ ಪೂಜಾರಿ ಮನೆಯವರ ಮಾಲೀಕತ್ವದ ಸಂಸ್ಥೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಸೋಮವಾರ ಉದ್ಘಾಟಿಸಿದರು.

ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್‌ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಧಾಕರ್ ರೈ, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಲೀಲಾಧರ ಡಿವಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ರಾಮಚಂದ್ರ ಗೌಡ, ನಗರ ಪಂಚಾಯತ್ ಸದಸ್ಯೆ ಶೀಲಾ ಅರುಣ್ ಕುರುಂಜಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

See also  ದೊಡ್ಡಡ್ಕದಲ್ಲಿ ಗಾಂಜಾ ಸೇವನೆ, ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ ಪೊಲೀಸರು..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget