ಸುಳ್ಯ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವಿವೇಕವಾಣಿ ಸರಣಿಯ 38ನೇ ಉಪನ್ಯಾಸ

212

ನ್ಯೂಸ್ ನಾಟೌಟ್‌: ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ವಿವೇಕವಾಣಿ ಸರಣಿಯ 38ನೇ ಉಪನ್ಯಾಸ ಕಾರ್ಯಕ್ರಮ ಸೋಮವಾರ (ಆ.12) ನಡೆಯಿತು.

ಕಾರ್ಯಕ್ರಮವನ್ನು ಮೈಸೂರು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (RIMSE) ಸಂಚಾಲಕ ಸ್ವಾಮಿ ಮಹಾಮೇಧಾನಂದಜಿ ಉದ್ಘಾಟಿಸಿ, “ಸ್ವಾಮಿ ವಿವೇಕಾನಂದರ ದೃಷ್ಟಿಕೋನದಲ್ಲಿ ಸಿಂಹ ಚಿಂತನೆ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.

ಮಾಜಿ ಸೈನಿಕರಾದ ಬೆಳ್ಳಾಲ್ ಗೋಪಿನಾಥ್ ರಾವ್, ಮಂಗಳೂರಿನ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಯೋಜಕರಾದ ಡಾ. ಚಂದ್ರು ಹೆಗ್ಡೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಎಂ., ಅಗದ ತಂತ್ರ ವಿಭಾಗದ ಪ್ರೊಫೆಸರ್ ಡಾ. ಅವಿನಾಶ್ ಕೆ.ವಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನ ಗೌರವ ಪ್ರಾಧ್ಯಾಪಕಿ ಡಾ. ಶೀಲಾ ಜಿ. ನಾಯಕ್, ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ, ಕಲಿಕಾ ವೈದ್ಯರು, ಸ್ನಾತಕೋತ್ತರ, ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಸೂತಿ ತಂತ್ರ ಹಾಗೂ ಸ್ತ್ರೀ ರೋಗ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಅಶೋಕ್ ಕೆ. ಅವರು ಸ್ವಾಮಿ ಮಹಾಮೇಧಾನಂದಜಿ ಅವರನ್ನು ಸನ್ಮಾನಿಸಿದರು.

ಕಾವ್ಯ ಎಸ್. ಗೌಡ, ಕಾವ್ಯ ಭಟ್ ಹಾಗೂ ಮೌಲ್ಯ ಎಸ್. ಪ್ರಾರ್ಥಿಸಿದರು. ಡಾ. ಹರ್ಷಿತಾ ಎಂ. ಪ್ರಾಸ್ತಾವಿಕ ಮಾತನಾಡಿದರು. ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಡಾ. ಅವಿನಾಶ್ ಕೆ.ವಿ. ವಂದಿಸಿದರು. ಭವಿತ್ ಶಂಕರ್ ಶೆಟ್ಟಿ, ಅನನ್ಯ ಎಚ್.ಎಸ್, ಚೇತನ ಎಂ. ಹಾಗೂ ಸ್ನೇಹ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.

See also  ಪಂಜ: ಕಬಡ್ಡಿ ತರಬೇತಿ ಶಿಬಿರ ಸಮಾರೋಪ ಸಮಾರಂಭ, ಶಿಬಿರಾರ್ಥಿಗಳಿಗೆ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget