ಕರಾವಳಿಶಿಕ್ಷಣಸುಳ್ಯ

ಸುಳ್ಯ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ,ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲೂ ಅಂತಾರಾ‍ಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮ

ನ್ಯೂಸ್‌ ನಾಟೌಟ್‌: ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ, ಹಾಗೂ ಆಯುಷ್ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ 9ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಬುಧವಾರ(ಜೂನ್‌ 21) ಆಚರಿಸಲಾಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಚಿದಾನಂದ ಕೆ.ವಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಉಪಾಧ್ಯಕ್ಷೆ ಶೋಭಾ ಚಿದಾನಂದ, ಎಒಎಲ್‌ಇ ಕೌನ್ಸಿಲ್ ಮೆಂಬರ್ ಜಗದೀಶ ಅಡ್ತಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಪ್ರಮೋದ್ ಪಿ.ಎ. ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಿಂದ ತೆರೆದ ಮೈದಾನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಡಾ. ಅನುಷಾ ಎಂ., ಡಾ. ನಮೀತ ಶೆಟ್ಟಿ, ಡಾ. ಪೂಜಾ ಹಾಗೂ ಮಿ. ಮಹಂತ್ ರಾಜ್ ಅವರು ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಜಯವಾಣಿ ಎಂ. ಜಿ, ಡಾ. ಶಭೀನಾ ಟಿ.ಟಿ. ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಎಒಎಲ್‌ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಬಹುಮಾನ ವಿತರಿಸಿದರು. ಕಾಲೇಜಿನ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ದಿಲ್‌ಶಾನ ಕಾರ್ಯಕ್ರಮ ನಿರೂಪಿಸಿದರು.

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯಲ್ಲಿ ಅಂತಾರಾ‍ಷ್ಟ್ರೀಯ ಯೋಗ ದಿನಾಚರಣೆ

ನ್ಯೂಸ್‌ ನಾಟೌಟ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ (ಜೂನ್‌ 21 ) ಯೋಗ ದಿನ ಆಚರಿಸಲಾಯಿತು.

ಯೋಗ ಶಿಕ್ಷಕಿ ಅಕ್ಷತಾ ಶೆಟ್ಟಿ ಸುಳ್ಯ ಯೋಗಾಸನದ ಮಹತ್ವ ವಿವರಿಸಿ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ವಿವಿಧ ಯೋಗಾಸನಗಳ ಪ್ರಾತ್ಯಾಕ್ಷಿಕೆ ನೀಡಿದರು. ಉಷಾ ಸುಳ್ಯ ಯೋಗ ಪ್ರಾತ್ಯಾಕ್ಷಿಕೆ ನೀಡಲು ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ ಬಿ., ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

Shakthi Yojane:ಮಹಿಳೆಯರೇ ,ಸ್ಮಾರ್ಟ್ ಕಾರ್ಡ್ ಇಲ್ಲಾಂದ್ರೆ ಫ್ರೀಯಾಗಿ ಓಡಾಡಕ್ಕಾಗಲ್ಲ;ಇದನ್ನು ಪಡೆಯುವುದು ಹೇಗೆ?ಎಲ್ಲಿ ಸಿಗಲಿದೆ?

‘ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ’ ಪ್ರಚೋದನಾಕಾರಿ ಹೇಳಿಕೆ :ಶರಣ್ ಪಂಪ್ ವೆಲ್ ವಿರುದ್ಧ ಕೇಸ್ ದಾಖಲು

ಕರ್ನಾಟಕದ ಪೊಲೀಸ್‌ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದದ್ದೇಕೆ? ಆರೋಪಿಗಳನ್ನು ಬಂಧಿಸಲು ಕೇರಳಕ್ಕೆ ತೆರಳಿದ್ದ ಕರ್ನಾಟಕ ಪೊಲೀಸರು ಮಾಡಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ