ಕ್ರೈಂಸುಳ್ಯ

ಸುಳ್ಯ: ಪಯಸ್ವಿನಿ ನದಿ ತಟದಲ್ಲಿ ಚಪ್ಪಲಿ ಇಟ್ಟು ವ್ಯಕ್ತಿ ನಾಪತ್ತೆ ಹಿನ್ನೆಲೆ, ನೀರಿಗಿಳಿದ ಮುಳುಗು ತಜ್ಞರು, ಕಾರ್ಯಾಚರಣೆ ಆರಂಭ

102

ನ್ಯೂಸ್ ನಾಟೌಟ್: ಪಯಸ್ವಿನಿ ನದಿ ತಟದಲ್ಲಿ ಚಪ್ಪಲಿ ಇಟ್ಟು ನಾಪತ್ತೆಯಾಗಿರುವ ವ್ಯಕ್ತಿಗಾಗಿ ಹುಡುಕಾಟ ಆರಂಭವಾಗಿದೆ. ಸ್ಥಳಕ್ಕೆ ಸುಳ್ಯ ಅಗ್ನಿ ಶಾಮಕ ಸಿಬ್ಬಂದಿ, ಮುಳುಗು ತಜ್ಞರು ಆಗಮಿಸಿದ್ದಾರೆ. ಇದೀಗ ಕಾರ್ಯಾಚರಣೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.

ಕುಮಾರ್ ಕುರುಂಜಿಗುಡ್ಡೆ ಅನ್ನುವವರು ನಿನ್ನೆ (ಭಾನುವಾರ) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಾರೆ. ವಿಶೇಷ ಚೇತನ ವ್ಯಕ್ತಿಯಾಗಿರುವ ಅವರು ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಟೀವಿ ನೋಡುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ನಡೆದಿದ್ದಾರೆ. ಆ ಬಳಿಕ ವಾಪಸ್ ಮನೆಗೆ ಬಂದಿಲ್ಲ. ಹೀಗಾಗಿ ಮನೆಯವರು ಆತಂಕಗೊಂಡು ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಸೋಮವಾರ ಪೂರ್ತಿ ಅವರ ಹುಡುಕಾಟ ನಡೆಸಲಾಯಿತು. ಈ ವೇಳೆ ಅವರ ಚಪ್ಪಲಿ ಪಯಸ್ವಿನಿ ನದಿ ತಟದ ಭಸ್ಮಡ್ಕ ಎಂಬಲ್ಲಿ ಸಿಕ್ಕಿದೆ. ಈ ಜಾಗ ಬಹಳಷ್ಟು ಅಪಾಯಕಾರಿಯಾಗಿದ್ದು ಪಯಸ್ವಿನಿ ನದಿಯ ಸುಳಿ ಹಲವರನ್ನು ಇಲ್ಲಿ ಬಲಿ ಪಡೆದುಕೊಂಡಿದೆ. ಇಂತಹ ಜಾಗದಲ್ಲಿ ಕುಮಾರ್ ಚಪ್ಪಲಿ ಸಿಕ್ಕಿರುವುದರಿಂದ ಸಹಜವಾಗಿಯೇ ಅವರೇನಾದರೂ ನೀರಿಗೆ ಜಿಗಿದಿರಬಹುದೇ ಅನ್ನುವ ಆತಂಕ ವ್ಯಕ್ತವಾಗಿದೆ. ಸದ್ಯ ಹುಡುಕಾಟ ಶುರುವಾಗಿದೆ.

ಕುಮಾರ್ ಅವರು ಯಾರಿಗಾದರೂ ಬೇರೆಲ್ಲಾದರೂ ಕಾಣಲು ಸಿಕ್ಕಿದರೆ ತಕ್ಷಣ ಮಂಜು ಎನ್ನುವವರ ಮೊಬೈಲ್ ಸಂಖ್ಯೆ 78996 77259 ಸಂಪರ್ಕಿಸಲು ಕೋರಲಾಗಿದೆ.

See also  ಮಡಿಕೇರಿ: ಸರ್ಕಾರಿ ಬಸ್ ಮತ್ತು ಆಂಬ್ಯುಲೆನ್ಸ್ ನಡುವೆ ಅಪಘಾತ..! 3 ಮಂದಿ ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget   Ad Widget   Ad Widget   Ad Widget