ನ್ಯೂಸ್ ನಾಟೌಟ್: ಸುಳ್ಯ – ಮಡಪ್ಪಾಡಿ ಸರ್ಕಾರಿ ಬಸ್ ನಲ್ಲಿ ಬಿದ್ದು ಸಿಕ್ಕಿದ ಮಹಿಳೆಯ ಪರ್ಸ್ ನ್ಯೂಸ್ ನಾಟೌಟ್ ನಲ್ಲಿ ವರದಿ ಪ್ರಕಟಗೊಂಡ ಕೇವಲ 1 ಗಂಟೆಯೊಳಗೆ ವಾರಿಸುದಾರರ ಕೈ ಸೇರಿದೆ.
ಸುಳ್ಯ ಬಸ್ ನಿಲ್ದಾಣದಿಂದ ಮಡಪ್ಪಾಡಿ ಕಡೆಗೆ ಬಸ್ ಶನಿವಾರ (ಆ.9) ಸಂಜೆ 4.30ಕ್ಕೆ ಹೊರಟ ಬಸ್ ನಲ್ಲಿ ದುಗಲಡ್ಕ ತಲುಪುತ್ತಿದ್ದಂತೆ ಕಂಡಕ್ಟರ್ ಯತೀಶ್ ಅವರಿಗೆ ಮಹಿಳೆಯ ಪರ್ಸ್ ಬಿದ್ದು ಸಿಕ್ಕಿದೆ. ಅದರೊಳಗೆ 10 ಸಾವಿರ ರೂ. ಇತ್ತು. ಹೀಗಾಗಿ ಪರ್ಸ್ ವಾರಿಸುದಾರರು ತಮ್ಮ ಪರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅದನ್ನು ಪಡೆದುಕೊಳ್ಳಬೇಕೆಂದು ಯತೀಶ್ ಅವರು ನ್ಯೂಸ್ ನಾಟೌಟ್ ಮೂಲಕ ಮನವಿ ಮಾಡಿದ್ದರು. ಪರ್ಸ್ ನ ವಾರಿಸುದಾರರಾದ ಭುವನೇಶ್ವರಿಯವರ ಅಳಿಯ ಶರವಣ ಸೋಣಂಗೇರಿ ಅವರು ಸುಳ್ಯ ಬಸ್ ನಿಲ್ದಾಣದಲ್ಲಿ ಪರ್ಸ್ ಅನ್ನು ಯತೀಶ್ ಅವರಿಂದ ಪಡೆದುಕೊಂಡಿದ್ದಾರೆ.