ಕಾಸರಗೋಡುಕ್ರೈಂಸುಳ್ಯ

ಸುಳ್ಯದ ಯುವಕರಿಬ್ಬರು ಡ್ರಗ್ಸ್ ಕೇಸ್ ನಲ್ಲಿ ಅಂದರ್, ಕೇರಳ ಪೊಲೀಸರಿಗೆ ಮಾಲು ಸಮೇತ ಸಿಕ್ಕಿ ಬಿದ್ದರು

222

ನ್ಯೂಸ್ ನಾಟೌಟ್: ಮಾದಕ ವಸ್ತುವಿನ ಸಾಗಾಟ ನಡೆಸಿದ ಸುಳ್ಯ ಮೂಲದ ಇಬ್ಬರು ಯುವಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಗೆ ಸೇರಿದ 1.5 ಲಕ್ಷ ರೂ. ಮೌಲ್ಯದ ಎಂಡಿಎಂಎಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತರನ್ನು ಸುಳ್ಯದ ಅಲೆಟ್ಟಿ ನಿವಾಸಿಗಳಾದ ಉಮ್ಮರ್ ಫಾರೂಕ್ (33) ಮತ್ತು ಎ.ಎಚ್.ಸಿದ್ದೀಕ್ ಎಂದು ಗುರುತಿಸಲಾಗಿದೆ. ಮಾನಂದವಾಡಿ ಅಬಕಾರಿ ವೃತ್ತ ನಿರೀಕ್ಷಕ ಎ ಪ್ರಜಿತ್ ನೇತೃತ್ವದ ತಂಡವು ಮಿಂಚಿನ ದಾಳಿ ನಡೆಸುವ ಮೂಲಕ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಎಂಡಿಎಂಎಯನ್ನು ಪ್ರತಿ ಗ್ರಾಂಗೆ 4000 ರೂ.ಗೆ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

See also  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಬಿರುಗಾಳಿ, ಭಾರಿ ಮಳೆಯ ಭೀತಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget