ಸುಳ್ಯ

ಸುಳ್ಯ: ಕಾಂತಮಂಗಲ ಸೇತುವೆ ಬಳಿ ಮಹಿಳೆಯ ಹೈಡ್ರಾಮಾ..!, ಮನೆಯವರು ನೀರಿಗೆ ಹಾರಿದ್ದಾರೆ ಎಂದು ರಂಪಾಟ ಸೃಷ್ಟಿಸಿದ್ದೇಕೆ..?

39
Spread the love

ನ್ಯೂಸ್‌ ನಾಟೌಟ್‌: ಗಂಡನೊಂದಿಗೆ ಜಗಳವಾಡಿ ಮನೆಯಿಂದ ಓಡಿಬಂದ ಮಹಿಳೆಯೊಬ್ಬರು ಕಾಂತಮಂಗಲ ನದಿಗೆ ಹಾರಲು ಯತ್ನಿಸಿದ ಘಟನೆ ಸುಳ್ಯ ಸಮೀಪದ ಕಾಂತಮಂಗಲ ಸೇತುವೆ ಬಳಿ ಗುರುವಾರ ಮುಂಜಾನೆ ನಡೆದಿದೆ.

ಯಾವುದೋ ಕಾರಣಕ್ಕೆ ಮನೆಯಲ್ಲಿ ಗಂಡನ ಜತೆ ಜಗಳವಾಡಿ ಬಳಿಕ ಮಹಿಳೆ ಕಾಂತಮಂಗಲ ಸೇತುವೆ ಬಳಿಯಲ್ಲಿ ನಿಂತು ನಮ್ಮ ಮನೆಯವರು ನೀರಿಗೆ ಹಾರಿದ್ದಾರೆ ಎಂದು ಸೇತುವೆ ಬಳಿ ರೋಧಿಸುತ್ತ ಹೈಡ್ರಾಮಾ ಸೃಷ್ಟಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಬಳಿಕ ಮಹಿಳೆಯನ್ನು ಸರಿಯಾಗಿ ವಿಚಾರಿಸಿದಾಗ ಮನೆಯಲ್ಲಿ ಜಗಳವಾಗಿರುವ ವಿಷಯ ಬೆಳಕಿಗೆ ಬಂದಿದೆ. ಇದರಿಂದ ಮಹಿಳೆ ನದಿಗೆ ಹಾರಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಅವರ ಮನೆಯವರು ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದು, ಸದ್ಯ ಪೊಲೀಸರು ಠಾಣೆಯಲ್ಲಿ ಕರೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

See also  ಪಂಜದಲ್ಲಿ ಪೆಟ್ರೋಲ್ , ಡೀಸೆಲ್ ಸಿಗದೆ ವಾಹನ ಸವಾರರ ಪರದಾಟ, ಸ್ಥಳೀಯ ಬಂಕ್ ಗಳಲ್ಲಿ ಆಗಿದ್ದಾದರೂ ಏನು..?
  Ad Widget   Ad Widget   Ad Widget