ಕ್ರೈಂಸುಳ್ಯ

ಕನಕಮಜಲಿನಲ್ಲಿ ಇಬ್ಬರ ಜೀವ ತೆಗೆದು ಪರಾರಿಯಾಗಿದ್ದ ಯಮಸ್ವರೂಪಿ ಕಾರಿನ ಗುರುತು ಪತ್ತೆ..! ಕಾರು ನೀಡಿದ ಒಂದೇ ಒಂದು ಸುಳಿವಿನಿಂದ ಸಿಕ್ಕಿಬಿದ್ದ ಹಿಟ್ ಅಂಡ್ ರನ್ ರಾಕ್ಷಸ..!

1.6k

ನ್ಯೂಸ್ ನಾಟೌಟ್: ಕನಕಮಜಲಿನ ಕೋಡಿ ತಿರುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಪಾದಾಚಾರಿಗಳಿಗೆ ಕತ್ತಲ ರಾತ್ರಿಯಲ್ಲಿ ಹಿಂದಿನಿಂದ ಗುದ್ದಿ ಜೀವ ತೆಗೆದು ಪರಾರಿಯಾಗಿದ್ದ ರಕ್ಕಸ ಕಾರಿನ ಗುರುತನ್ನು ಸುಳ್ಯ ಪೊಲೀಸರು ಪತ್ತೆ ಹೆಚ್ಚಿದ್ದಾರೆ.

ಸುಳ್ಯದ ಬೀರಮಂಗಲದ ಆರ್ ಕೆ ಭಟ್ ಅನ್ನುವ ವ್ಯಕ್ತಿಗೆ ಸೇರಿದ ಕಾರು ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಕಾರನ್ನುಶನಿವಾರ (ಫೆ.8) ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಭಜನೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಇಬ್ಬರಿಗೆ ಡಿಕ್ಕಿಯಾಗಿದೆ. ಬಳಿಕ ಚಾಲಕ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಆತನ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲು ನಿವಾಸಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅವಘಡದಲ್ಲಿ ಮಾವ ರಾಮಯ್ಯ (67 ವರ್ಷ) ಹಾಗೂ ಅಳಿಯ ಜನಾರ್ದನ (50 ವರ್ಷ) ಇಬ್ಬರೂ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.

ಗಂಭೀರ ಗಾಯಗೊಂಡಿದ್ದ ರಾಮಣ್ಣ ರಸ್ತೆಯಲ್ಲಿಯೇ ಬಿದ್ದಿದ್ದರು. ಇವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಇನ್ನೋರ್ವ ಗಾಯಾಳು ಜನಾರ್ದನ ಅನ್ನುವವರು ದೂರಕ್ಕೆ ಎಸೆಯಲ್ಪಟ್ಟು ಗುಂಡಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದರು. ಘಟನೆ ನಡೆದು ಅರ್ಧ ಗಂಟೆ ಬಳಿಕ ಇನ್ನೊಬ್ಬರು ಗಾಯಾಳು ಕೂಡ ಇದ್ದದ್ದು ಗೊತ್ತಾಗಿತ್ತು. ಯಾರೂ ಸಹಾಯಕ್ಕೆ ಸಿಗದೆ ರಕ್ತ ಹೋಗಿ ಅವರು ಕೂಡ ಗಂಭೀರ ಸ್ಥಿತಿಗೆ ತಲುಪಿದ್ದರು.

ಅವರಿಬ್ಬರನ್ನು ಮಂಗಳೂರಿಗೆ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರು ಕೂಡ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರು ಇಬ್ಬರು ಕೂಡ ಇರ್ದೆಬೆಟ್ಟಂಪ್ಪಾಡಿಯವರು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಇಕೊ ಕಾರಿನ ಲೋಗೋ ಘಟನೆ ನಡೆದ ಸ್ಥಳದಲ್ಲಿ ಬಿದ್ದು ಸಿಕ್ಕಿದ್ದರಿಂದ ಕಾರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಅನುಕೂಲವಾಯಿತು. ಇದರ ಆಧಾರದಲ್ಲಿ ಸುಮಾರು 30 ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿ ಆರೋಪಿಯ ಕಾರಿನ ಗುರುತನ್ನು ಪತ್ತೆ ಹಚ್ಚಲಾಯಿತು. ಸದ್ಯ ಆರೋಪಿ ಇನ್ನೂ ಕೈಗೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಕಾರು ನಿಲ್ಲಿಸಿದ್ದರೆ ಓರ್ವನ ಜೀವ ಉಳಿಸಬಹುದಿತ್ತು.

See also  ಸುಬ್ರಹ್ಮಣ್ಯ: ಸ್ನಾನ ಘಟ್ಟದ ಬಳಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ, ಬೆಂಗಳೂರಿನಿಂದ ಬಂದ ವೃದ್ದ ನೀರಿನ ಸೆಳೆತಕ್ಕೆ ಸಿಕ್ಕಿದ್ದೇಗೆ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget