ನ್ಯೂಸ್ ನಾಟೌಟ್: ಎರಡು ದಿನಗಳಿಂದ ಸುಳ್ಯ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಜೇನು ಸೊಸೈಟಿ ಸಮೀಪ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ನೀರು ಪೋಲಾಗುತ್ತಿತ್ತು.ಕೊನೆಗೂ ಇದಕ್ಕೆ ಪರಿಹಾರ ಸಿಕ್ಕಿದೆ.ಇದೀಗ ನೀರು ಚಿಮ್ಮಿ ಬರುತ್ತಿರುವ ಗುಂಡಿಯನ್ನು ಮುಚ್ಚಲಾಗಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ವಿಡಿಯೋ ಸಮೇತ ‘ನೀರಿನ ಅಭಾವದ ನಡುವೆಯೂ ನೀರು ಪೋಲು!;ಪೈಪ್ ಒಡೆದು ರಸ್ತೆ ಮೇಲೆಲ್ಲಾ ಹರಿಯುತ್ತಿದೆ ಕುಡಿಯುವ ನೀರು!!’ ವರದಿ ಪ್ರಕಟಿಸಿತ್ತು. ಇದಾದ ಬಳಿಕ ಕೆಲವೇ ಗಂಟೆಗಳಲ್ಲಿ ನೀರಿನ ಪೈಪ್ ನ್ನು ದುರಸ್ಥಿಗೊಳಿಸಲಾಗಿದೆ.