ಕರಾವಳಿ

ಸುಳ್ಯ: ಇನ್ವರ್ಟರ್ ನೊಳಗೆ ಅಡಗಿದ್ದ ಯಮ..! ಪ್ಲಗ್ ತೆಗೆಯುತ್ತಿದ್ದಂತೆ ಶಾಕ್..! ಮಹಿಳೆ ದಾರುಣ ಸಾವು

ನ್ಯೂಸ್ ನಾಟೌಟ್: ಬೆಳಕು ನೀಡುವುದಕ್ಕೆ ಮನೆಗೆ ಅಳವಡಿಸಿದ್ದ ಇನ್ವರ್ಟರ್ ಮಹಿಳೆಯೊಬ್ಬರ ಪಾಲಿಗೆ ಕತ್ತಲಾಗಿರುವ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರಿನಿಂದ ವರದಿಯಾಗಿದೆ. ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಲಲಿತಾರವರು ಪ್ರತಿ ದಿನ ನಿದ್ರೆಗೆ ಜಾರುವ ಮೊದಲು ಇನ್ವರ್ಟರ್ ಆಫ್ ಮಾಡುತ್ತಿದ್ದರು. ಎಂದಿನಂತೆಯೇ ಇನ್ವರ್ಟರ್ ಆಫ್ ಮಾಡಿ ಮಲಗೋಣ ಎಂದು ಇನ್ವರ್ಟರ್ ಪ್ಲಗ್ ಅನ್ನು ತೆಗೆದಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲಿಯೇ ಕುಸಿದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತರು ಪತಿ, ಇಬ್ಬರು ಪುತ್ರರಾದ ಗೌತಮ್, ಅಖಿಲ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Related posts

ಸುಳ್ಯ: ಮೇಯಲು ಬಂದ ಆಡುಗಳನ್ನು ಕಟ್ಟಿ ಹಾಕಿದ ನಗರ ಪಂಚಾಯತ್..! ದಂಡ ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಮಾಲೀಕರಿಗೆ ಖಡಕ್ ಸೂಚನೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಬಿರುಗಾಳಿ, ಭಾರಿ ಮಳೆಯ ಭೀತಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ

ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಶರಣು,ಡೆತ್ ನೋಟ್ ನಲ್ಲೇನಿದೆ?